ಪುತ್ತೂರು: ಆರೋಗ್ಯದಲ್ಲಿ ದಿಢೀರ್ ಏರುಪೇರು: SSLC ವಿದ್ಯಾರ್ಥಿನಿ ಮೃತ್ಯು
ಪುತ್ತೂರು: ಅನಾರೋಗ್ಯದಿಂದಾಗಿ ಇಲ್ಲಿನ ಸಂತ ವಿಕ್ಟರ್ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ಘಟನೆ ನ.12ರಂದು ನಡೆದಿದೆ.

ನೆಲ್ಲಿಕಟ್ಟೆ ನಿವಾಸಿ ಸತೀಶ್ ಭಂಡಾರಿ ಎಂಬವರ ಪುತ್ರಿ ಹಿಮಾನಿ(16ವ.)ಮೃತಪಟ್ಟವರು.ಅವರಿಗೆ ನ.11ರಂದು ರಾತ್ರಿ ಸ್ವಲ್ಪಮಟ್ಟಿನ ಅನಾರೋಗ್ಯವಿತ್ತಾದರೂ ಅದನ್ನು ಲೆಕ್ಕಿಸದೆ ಮಲಗಿದ್ದರು. ನ.12ರ ಬೆಳಿಗ್ಗೆ ಹಿಮಾನಿಯವರ ಆರೋಗ್ಯದಲ್ಲಿ ಏರುಪೇರಾಗಿರುವುದನ್ನು ಗಮನಿಸಿದ ಮನೆಯವರು ಆಕೆಯನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರು.ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ಮೃತದೇಹವನ್ನು ಮಂಗಳೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಆಕೆಯ ಮನೆಗೆ ತಂದು ಪುತ್ತೂರು ಮಡಿವಾಳ ಕಟ್ಟೆಯಲ್ಲಿ ಅಂತಿಮ ಸಂಸ್ಕಾರ ಮಾಡಲಾಯಿತು.ಮೃತರು, ತಂದೆ ಸತೀಶ್ ಭಂಡಾರಿ, ತಾಯಿ ಚೇತನಾ ಮತ್ತು ಸಹೋದರ ಮಂದಿಪ್ ಅವರನ್ನು ಅಗಲಿದ್ದಾರೆ.
ಹಿಮಾನಿ ಅವರ ಮೃತ ದೇಹವನ್ನು ಸಂಜೆ ಪುತ್ತೂರು ನೆಲ್ಲಿಕಟ್ಟೆ ಮನೆಗೆ ತಂದಾಗ ಮನೆ ಮುಂದೆ ನೂರಾರು ಸಾರ್ವಜನಿಕರು ಜಮಾಯಿಸಿದ್ದರು.