ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಆಯೋಜಿಸಲಾಗಿದ್ದ ‘ಯಂಗ್ ಇಂಡಿಯಾ ಕೇ ಬೋಲ್’ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತನಾಗಿ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆಗೆ ಯುವವಾಗ್ಮಿ, ಬರಹಗಾರ ಆಮಿರ್ ಬನ್ನೂರು ಆಯ್ಕೆಯಾಗಿದ್ದಾರೆ. ಇವರು ಬನ್ನೂರು ನಿವಾಸಿ ಕೆ.ಎಚ್ ಅಬ್ದುಲ್ಲ ಮುಸ್ಲಿಯಾರ್ ಹಾಗೂ ಖತೀಜ ದಂಪತಿ ಪುತ್ರ.