ರಾಜ್ಯ

ಬೆಂಗಳೂರು: ಪ್ರಯಾಣಿಕನ ಬ್ಯಾಗ್ ಕದ್ದು ಪೊಲೀಸರ ಅತಿಥಿಯಾದ ಆಟೋ ಚಾಲಕ

ಬೆಂಗಳೂರು:  ಪ್ರಯಾಣಿಕರ ಬ್ಯಾಗ್‌ ಕಳ್ಳತನ ಮಾಡಿದ್ದ ಆರೋಪದಡಿ ಆಟೊ ಚಾಲಕ ಪವನ್ ಎಂಬುವವರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರದ‌ ನಿವಾಸಿ ಪವನ್ ಅವರು ಅಧಿಕಾರಿಯೊಬ್ಬರ ಬ್ಯಾಗ್ ಕದ್ದಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಆಟೊ ನೋಂದಣಿ ಸಂಖ್ಯೆ ಆಧರಿಸಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ₹1.65 ಲಕ್ಷ ನಗದು ಹಾಗೂ ಬಟ್ಟೆಗಳ ಸಮೇತ ಎರಡು ಬ್ಯಾಗ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

Leave a Reply

Your email address will not be published. Required fields are marked *

error: Content is protected !!