ಕಾರು ಮಾರಿ ವರ್ಷ ಕಳೆಯಿತು
ಕುಂಬ್ರದ ಶಾಮಿಯಾನ ಮಾಲಿಕಗೆ ಪೊಲೀಸ್ ನೊಟೀಸ್…!
ಪುತ್ತೂರು: ತನ್ನಲ್ಲಿದ್ದ ಇನ್ನೋವಾ ಕಾರನ್ನು ಮಾರಿ ವರ್ಷ ಕಳೆದ ಬಳಿಕ ಕುಂಬ್ರದ ಶಾಮಿಯಾನ ಮಾಲಿಕ ಮುನೀರ್ ಮುಕ್ಕೂರು ಎಂಬವರಿಗೆ `ಕಾರಿನ ನಂಬರ್ ಪ್ಲೇಟ್ ಫಾಲ್ಟ್ ಇದೆ ಎಂದು ಹೇಳಿ ರೂ. ೫೦೦ ದಂಡ ಕಟ್ಟುವಂತೆ ಮಂಗಳೂರು ಸಿಟಿ ಟ್ರಾಫಿಕ್ ಪೊಲೀಸ್ ನೊಟೀಸ್ ಕಳುಹಿಸಿದ್ದಾರೆ.

ಮುನೀರ್ ಕುಂಬ್ರದ ವ್ಯಕ್ತಿಯೋರ್ವರಿಂದ ವರ್ಷದ ಹಿಂದೆ ಇನ್ನೋವಾ ಕಾರು ಖರೀದಿಸಿದ್ದರು. ಆ ಕಾರನ್ನು ಸವಣೂರಿನ ರಫೀಕ್ ಎಂಬವರಿಗೆ ಮಾರಾಟ ಮಾಡಿದ್ದರು. ರಫೀಕ್ ಅವರಿಗೆ ಕಾರು ಮಾರಿದ್ದು ಕಾರು ರಫೀಕ್ ಹೆಸರಲ್ಲಿ ನೋಂದಣಿಯಾಗಿದೆ. ಆ ಬಳಿಕ ರಫೀಕ್‌ರವರು ಕಾರನ್ನು ಉಪ್ಪಿನಂಗಡಿಯ ವ್ಯಕ್ತಿಗೆ ಮಾರಾಟ ಮಾಡಿದ್ದು ಇದೀಗ ಕಾರು ಉಪ್ಪಿನಂಗಡಿಯ ವ್ಯಕ್ತಿಯ ಹೆಸರಿನಲ್ಲಿ ನೋಂದಣಿಯಾಗಿದೆ. ಇದೇ ಕಾರಿನಲ್ಲಿ ಉಪ್ಪಿನಂಗಡಿಯ ವ್ಯಕ್ತಿ ಮಂಗಳೂರಿಗೆ ತೆರಳಿದ್ದಾರೆ. ಅ.1 ರಂದು ಮಂಗಳೂರಿನಲ್ಲಿ ಸಂಚರಿಸುತ್ತಿದ್ದಾಗ ಕಾರಿನ ನಂಬರ್ ಪ್ಲೇಟಿನಲ್ಲಿ ದೋಷವಿದೆ ಎಂದು ದಂಡ ಹಾಕಿದ್ದರು. ಆದರೆ ಕಾರು ಮಾಲಕ ದಂಡ ಪಾವತಿ ಮಾಡಿರಲಿಲ್ಲ. 20 ದಿನಗಳ ಬಳಿಕ ಮುನೀರ್ ಹೆಸರಿನಲ್ಲಿ ನೊಟೀಸ್ ಬಂದಿದ್ದು ರೂ. 500 ದಂಡ ಕಟ್ಟುವಂತೆ ತಿಳಿಸಲಾಗಿದೆ. ಕಾರು ಮುನೀರ್ ಹೆಸರಿನಲ್ಲಿಲ್ಲದೇ ಇದ್ದರೂ ದಂಡ ಕಟ್ಟಲು ಅವರ ಹೆಸರಿನಲ್ಲಿ ನೊಟೀಸ್ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.

ಮುನೀರ್ ಅವರ ಕಾರು ಪುತ್ತೂರು ಆರ್ ಟಿ ಒ ಕಚೇರಿಯಲ್ಲೇ ಸವಣೂರಿನ ರಫೀಕ್ ಹೆಸರಿಗೆ ನೋಂದಣಿಯಾಗಿದ್ದು ಆ ಬಳಿಕ ಅದೇ ಆರ್ ಟಿ ಒ ಕಚೇರಿಯಲ್ಲೇ ಉಪ್ಪಿನಂಗಡಿ ವ್ಯಕ್ತಿ ಹೆಸರಿನಲ್ಲಿ ನೋಂದಣಿಯಾಗಿದೆ. ಕಾರು ರಫೀಕ್ ಹೆಸರಿನಲ್ಲಿ ನೋಂದಣಿಯದ ಬಗ್ಗೆ ದಾಖಲೆಯೂ ಇದೆ. ಆದರೆ ಮುನೀರ್ ಹೆಸರಿಗೆ ಪೊಲೀಸರು ಹೇಗೆ ನೊಟೀಸ್ ಕಳುಹಿಸಿದ್ದಾರೆ ಎಂಬುದು ಅಚ್ಚರಿಗೆ ಕಾರಣವಾಗಿದೆ.

ಆರ್ ಟಿ ಒ ಕಚೇರಿಯಲ್ಲಿ ನೋಂದಣಿಯಗಿರುವುದು ಮೂಲ ದಾಖಲೆಯಲ್ಲಿ ಬದಲಾವಣೆಯಾಗಿಲ್ಲವೇ? ಬದಲಾವಣೆಯಾಗದೇ ಇದ್ದರೆ ಇದಕ್ಕೆ ಆರ್ ಟಿ ಒ ಕಚೇರಿ ಹೊಣೆಯಲ್ಲವೇ? ತಾನು ಮಾಡದ ತಪ್ಪಿಗೆ, ತನ್ನದಲ್ಲದ ಕಾರಿಗೆ ನಾನು ಯಾಕೆ ದಂಡ ಪವತಿಸಬೇಕು ಎನ್ನುತ್ತಿದ್ದಾರೆ ಶಾಮಿಯಾನ ಮಾಲಕ ಮುನೀರ್.