ಮಂಗಳೂರು: 2 ವರ್ಷದ ಮಗುನಿಂದ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ
ಮಗುವಿನ ಕಾರ್ಯಕ್ಕೆ ಬಂತು ಪ್ರಶಂಸೆಯ ಮಹಾಪೂರ
ಮಂಗಳೂರು: ಎರಡು ವರ್ಷದ ಮಗುವೊಂದು ತನ್ನ ಕೂದಲನ್ನು ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿ ಸುದ್ದಿಯಾಗಿದ್ದಾಳೆ.
ಮರೋಳಿಯ ಭರತ್ ಕುಲಾಲ್ ಮತ್ತು ಸುಮಲತಾ ಅವರ ಪುತ್ರಿ ಆದ್ಯ ಕುಲಾಲ್ ಕ್ಯಾನ್ಸರ್ ರೋಗಿಗಳಿಗೆ ವಿಗ್ ಮಾಡಲು ತಮ್ಮ ಕೂದಲನ್ನು ದಾನ ಮಾಡಿದ್ದು, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ.