ಹಾಜಿ ಮುಸ್ತಫಾ ಕೆಂಪಿ ನಿಧನಕ್ಕೆ SDPI ಸಂತಾಪ
ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಕೆಂಪಿ ನಿಧನ ಹೊಂದಿದ ವಾರ್ತೆ ಅತೀವ ನೋವನ್ನು ತರಿಸಿದೆ,ಈ ಮೂಲಕ ಸಮಾಜ ಮತ್ತು ಸಮುದಾಯದ ಒಬ್ಬ ಉತ್ತಮ ನೇತಾರನನ್ನು ಕಳೆದುಕೊಂಡಿದೆ.
ಉಪ್ಪಿನಂಗಡಿ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ, ಸಮಾಜ ಸೇವಕ,ಸಮುದಾಯ ಪರ ಹೋರಾಟಗಾರ,ಮುಸ್ಲಿಂ ಐಕ್ಯತಾ ವೇದಿಕೆಯ ಸ್ಥಾಪಕಾಧ್ಯಕ್ಷ ಸೇರಿದಂತೆ ವಿವಿಧ ಧಾರ್ಮಿಕ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಸಮಾಜಕ್ಕೆ ಮತ್ತು ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿದ್ದ ಇವರ ನಿಧನ ಸಮುದಾಯಕ್ಕೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಮರಣದಿಂದ ಸಮುದಾಯ ಒಬ್ಬ ಉತ್ತಮ ನಾಯಕನನ್ನು ಕಳೆದುಕೊಂಡಂತಾಗಿದೆ.
ಸೃಷ್ಟಿಕರ್ತನು ಇವರ ಪರಲೋಕ ಯಾತ್ರೆಯನ್ನು ಸುಗಮಗೊಳಿಸಲಿ. ಕುಟುಂಬಕ್ಕೆ ಮತ್ತು ಬಂದು ಬಳಗಕ್ಕೆ ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ತಿಳಿಸಿದ್ದಾರೆ