ಇಸ್ಲಾಂ ಧರ್ಮದ ವಿರುದ್ಧ ಅವಹೇಳನ
ಪುರೋಹಿತ ಶ್ರೀಕೃಷ್ಣ ಉಪದ್ಯಾಯ ವಿರುದ್ದ ದೂರು
ಪುತ್ತೂರು: ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡು, ಆರೋಪಿಯಾಗಿರುವ ಕೃಷ್ಣ ಉಪಾಧ್ಯಾಯರನ್ನು ಕೂಡಲೇ ಬಂಧಿಸಿ ಕ್ರಮ ಜರಗಿಸಬೇಕೆಂದು, ಆಗ್ರಹಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿಯ ನಿಯೋಗವು
ಪುತ್ತೂರು ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶ್ರೀ ಕೃಷ್ಣ ಉಪಾಧ್ಯಾಯರು ನಿರಂತರವಾಗಿ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡುತ್ತಿದ್ದು, ನಿನ್ನೆಯು ಕೂಡ ನಡೆದ ಸಭೆಯೊಂದರಲ್ಲಿ,ಇದರ ಬಗ್ಗೆ ಸಮರ್ಥನೆ ನೀಡಿದ್ದು, ಇದರಿಂದ ಮತ್ತಷ್ಟು ಕೋಮು ಪ್ರಚೋದನೆ ಉಂಟಾಗಿದೆ. ಇಂಥವರನ್ನು ಹದ್ದು ನಡಬೇಕಾದದ್ದು ಪೊಲೀಸ್ ಇಲಾಖೆ ಕರ್ತವ್ಯವಾಗಿದೆ. ಪೋಲಿಸ್ ಇಲಾಖೆ ಕೂಡಲೇ ಕ್ರಮ ಜರುಗಿಸಬೇಕೆಂದು ನಿಯೋಗವು ಆಗ್ರಹಿಸಿತು.
ನಿಯೋಗದಲ್ಲಿ ಕೆಪಿಸಿಸಿ ಮುಖಂಡ ಎಂ. ಎಸ್ ಮುಹಮ್ಮದ್, ಕೆಪಿಸಿಸಿ ಸಂಯೋಜಕರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶಕೂರ್ ಹಾಜಿ , ಶರೀಪ್ ಕೊಯಿಲ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಶೀದ್ ಮುರ , ಬ್ಲಾಕ್ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷರಾದ ರಹ್ಮಾನ್ ಕಾವು,ಸಿರಿಲ್ , ಸಿರಾಜ್ ಮನಿಲ, NSUI ಮುಖಂಡ ರಾದ ಭಾತೀಷ ಅಳಕೆಮಜಲು , ಸುಹೈಲ್, ಅಸ್ಟನ್, ಫಯಾಜ್ ಉಪಸ್ಥಿತರಿದ್ದರು.