ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ವತಿಯಿಂದ ಡಿವೈಎಸ್ಪಿ ಭೇಟಿ : ಮನವಿ ಸಲ್ಲಿಕೆ
ಪುತ್ತೂರು: ಕಾಣಿಯೂರಿನಲ್ಲಿ ನಿನ್ನೆ ಅಡ್ಡೂರು ನಿವಾಸಿಗಳಾದ ರಫೀಕ್ ಹಾಗೂ ರಮೀಝುದ್ದೀನ್ ಇವರ ಮೇಲೆ ಮರಾಣಾಂತಿಕವಾಗಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ವತಿಯಿಂದ ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಲಾಯಿತು.
ಹಲ್ಲೆ ನಡೆಸಿದ ಸಂಘ ಪರಿವಾರದ ಗೂಂಡಾಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಆಗ್ರಹಿಸಿದ್ದೇವೆ ಎಂದು ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಡಿವೈಸ್ಪಿ ವೀರಯ್ಯ ಅವರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷರಾದ ಹಾಜಿ ಅಶ್ರಫ್ ಕಲ್ಲೇಗ, ಉಪಾಧ್ಯಕ್ಷರಾದ ಇಬ್ರಾಹಿಂ ಸಾಗರ್, ಸಂಚಾಲಕರಾದ ನೂರುದ್ದೀನ್ ಸಾಲ್ಮರ, ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ಸೋಂಪಾಡಿ, ಹಮೀದ್ ಸಾಲ್ಮರ, ಅಶ್ರಫ್ ಮುಕ್ವೆ , ರಶೀದ್ ಮುರ, ಜುನೈದ್ ಸಾಲ್ಮರ, ಇಸ್ಮಾಯಿಲ್ ಎಂಬಿ, ಇಸ್ಮಾಯಿಲ್ ಅರಸಿಕೆರೆ, ಉಪಸ್ಥಿತರಿದ್ದರು