ಕರಾವಳಿ

ಪುತ್ತೂರು ಡಿವೈಎಸ್ಪಿ ಕಚೇರಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಚುನಾವಣಾ ಪೂರ್ವ ತಯಾರಿ ಕಾರ್ಯಗಾರ:
ಸುಳ್ಯ ವೃತ್ತ ನಿರೀಕ್ಷಕ ಸಿ.ಎಂ ರವೀಂದ್ರ, ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ ಪೊಲೀಸ್ ಠಾಣಾ ಉಪನಿರೀಕ್ಷಕರು ಭಾಗಿ



ಪೊಲೀಸ್ ಇಲಾಖೆ ವತಿಯಿಂದ ಮುಂಬರುವ ವಿಧಾನಸಭಾ ಚುನಾವಣೆಯ ಪೂರ್ವಭಾವಿ ಸಿದ್ಧತೆಗಾಗಿ ಪೊಲೀಸ್ ಅಧಿಕಾರಿಗಳಿಗೆ ಮತ್ತು ನೋಡಲ್ ಅಧಿಕಾರಿಗಳಿಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.



ಇದರ ಅಂಗವಾಗಿ ಪುತ್ತೂರು ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಇಂದು ಮಾಹಿತಿ ಕಾರ್ಯಗಾರ ನಡೆಸಲಾಗಿದ್ದು ಪುತ್ತೂರು ವಿಭಾಗದ ಡಿ ವೈ ಎಸ್ ಪಿ ಡಾ.ವೀರಯ್ಯ ಹಿರೇಮಠ್ ಚುನಾವಣೆಗೆ ಸಂಬಂಧಿಸಿ ಕರ್ತವ್ಯ ನಿರ್ವಹಿಸುವ ನೋಡಲ್ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.



ಈ ಕಾರ್ಯಗಾರದಲ್ಲಿ
ಚುನಾವಣೆಗೆ ಸಂಬಂದಿಸಿದ ಕರ್ತವ್ಯಗಳು ಹಾಗೂ ಸಿದ್ಧತೆಗಳ ಬಗ್ಗೆ,ಚುನಾವಣೆ ದೃಷ್ಟಿಯಿಂದ ತೆಗೆದು ಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ,
ಚುನಾವಣೆಗೆ ಸಂಬಂದಿಸಿದ ಕಾನೂನುಗಳ ಬಗ್ಗೆ, ಚುನಾವಣೆ ನೀತಿ ಸಂಹಿತೆ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.


ಕಾರ್ಯಗಾರದಲ್ಲಿ ಸುಳ್ಯ ಪೊಲೀಸ್ ವೃತ ನಿರೀಕ್ಷಕ ಸಿ ಎಂ ರವೀಂದ್ರ, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್, ಬೆಳ್ಳಾರೆ ಠಾಣಾ ಉಪನಿರೀಕ್ಷಕ ಸುಹಾಸ್, ಸುಬ್ರಹ್ಮಣ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಮಂಜುನಾಥ್, ಪುತ್ತೂರು ಠಾಣಾ ವ್ಯಾಪ್ತಿಯ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!