ಪುಂಜಾಲಕಟ್ಟೆ: ಲಾರಿ–ಪಿಕಪ್ ಮಧ್ಯೆ ಭೀಕರ ಅಪಘಾತ: ಮೂವರು ಗಂಭೀರ
ಪುಂಜಾಲಕಟ್ಟೆ : ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ – ಪಿಕಪ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ.
ಸಹಲ್(19) ಜೊತೆಯಿದ್ದ ಸ್ನೇಹಿತ ಅವಿನಾಶ್ (19), ಲಾರಿ ಚಾಲಕ ಧನರಾಜ್ (22) ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿನಿಂದ ಧರ್ಮಸ್ಥಳ ಕಡೆಗೆ ಚಲಿಸುತ್ತಿದ್ದ ಲಾರಿಯು, ಪುಂಜಾಲಕಟ್ಟೆಯಿಂದ ವಗ್ಗ ಕಡೆಗೆ ಹೋಗುವ ಪಿಕಪ್ ವಾಹನಕ್ಕೆ ರಭಸದಿಂದ ಡಿಕ್ಕಿ ಹೊಡೆದಿದೆ. ಹೊಡೆತದ ಪರಿಣಾಮ ಪಿಕಪ್ ವಾಹನದ ಮುಂಭಾಗ ಜಖಂ ಆಗಿದೆ.