ಕರಾವಳಿಕ್ರೈಂ

ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆಯ ಬಂಧನ



ಮಂಗಳೂರು: ಹದಿನೈದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮೂಡುಬಿದಿರೆ ಹಂಡೇಲ ಮಸೀದಿ ಬಳಿಯ ನಿವಾಸಿ ಸಫಿಯಾ(53) ಬಂಧಿತ ಆರೋಪಿ. ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ 2011ರಲ್ಲಿ ದಾಖಲಾಗಿದ್ದ ಅನೈತಿಕ ವ್ಯವಹಾರ ಪ್ರಕರಣದಲ್ಲಿ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.



ಮಂಗಳೂರು 3ನೇ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿ ಮಹಿಳೆ ವಿರುದ್ದ ಎಲ್‌ಪಿಸಿ ವಾರೆಂಟ್ ಹೊರಡಿಸಿತ್ತು. ಆರೋಪಿ ಮಹಿಳೆ ಪ್ರಕರಣ ದಾಖಲಾಗಿ ಬಂಧನದ ಸಮಯದಲ್ಲಿ ತನ್ನ ಹೆಸರನ್ನು ಆಯಿಶ ಎಂದು ಬದಲಿಸಿದ್ದು ಮಾತ್ರವಲ್ಲದೇ, ಪತಿ ಹೆಸರು-ವಿಳಾಸವನ್ನೂ ಸಹ ಮರೆಮಾಚಿ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ್ದಳು. ಇದೀಗ ಮಂಗಳೂರು ಮಹಿಳಾ ಪೊಲೀಸ್ ಠಾಣಾ ಅಧಿಕಾರಿ, ಸಿಬ್ಬಂದಿ ಸಫಿಯಾಳನ್ನು ಪತ್ತೆ ಮಾಡಿ, ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!