ಕರಾವಳಿ

ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‌ನ ವಾರ್ಷಿಕ ‘ಬ್ಯಾರಿ ಪ್ರಶಸ್ತಿ’ಗೆ ಪ್ರೇರಣಾ ತರಬೇತುದಾರ ರಫೀಕ್ ಮಾಸ್ಟರ್‌ ಆಯ್ಕೆ



ಪುತ್ತೂರು: ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‌ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜೂ.28ರಂದು ಬೆಂಗಳೂರಿನ ಬ್ಯಾರಿ ಸೌಹಾರ್ದ ಭವನದಲ್ಲಿ ನಡೆಯಲಿದೆ.



ಈ ವರ್ಷದ ಬ್ಯಾರಿ ಪ್ರಶಸ್ತಿಯನ್ನು ಪ್ರೇರಣಾ ತರಬೇತುದಾರ ರಫೀಕ್ ಮಾಸ್ಟರ್ ಮತ್ತು ವಾರ್ಷಿಕ ಬ್ಯಾರ್ದಿ ಪ್ರಶಸ್ತಿಯನ್ನು ಸಾಮಾಜಿಕ ಕಾರ್ಯಕರ್ತೆ ಕಾರ್ಕಳದ ಆಯೆಶಾ ಬಾನು ಅವರಿಗೆ ಘೋಷಿಸಲಾಗಿದ್ದು, ಜೂ.28ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

 


ಆರೋಗ್ಯ ಸಚಿವ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಸ್ತಾಕ್ ಮತ್ತು ಅತಿಥಿಗಳಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಮತ್ತು ಮುಖ್ಯಮಂತ್ರಿಯ ಹಣಕಾಸು ಸಲಹೆಗಾರ ಎಲ್.ಕೆ.ಅತೀಕ್ ಭಾಗವಹಿಸಲಿದ್ದಾರೆ. ಬ್ಯಾರೀಸ್ ವೆಲ್ವೇರ್ ಅಸೋಸಿಯೇಶನ್ ಅಧ್ಯಕ್ಷ ಅಡೂ‌ರ್ ಸಂಶುದ್ದೀನ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!