ನಾಟಿ ಮಾಡಿದ ಗಿಡಗಳನ್ನೇ ಕದ್ದೊಯ್ದ ಕಳ್ಳರು..!ಪೊಲೀಸ್ ದೂರು
ಪುತ್ತೂರು: ಜಮೀನಿನಲ್ಲಿ ನಾಟಿ ಮಾಡಿದ್ದ ತೆಂಗು ಹಾಗೂ ಕೊಕ್ಕೋ ಗಿಡಗಳನ್ನು ಕಳವು ಮಾಡಿದ ಘಟನೆ ಬೆಟ್ಟಂಪಾಡಿ ಗ್ರಾಮದ ಕಳೆಂಜಿಯಲ್ಲಿ ನಡೆದಿದೆ.

ಬೆಟ್ಟಂಪಾಡಿ ಕಳೆಂಜಿಲ ನಿವಾಸಿ ದೂಮ ಪೂಜಾರಿ ಮತ್ತು ರಾಕೇಶ್ ಪಿ ಶೆಟ್ಟಿಯವರ ಜಮೀನಲ್ಲಿದ್ದ ತೆಂಗಿನ ಸಸಿ ಮತ್ತು ಕೋಕೋ ಸಸಿಗಳು ಕಳವಾಗಿದೆ. ದೂಮ ಪೂಜಾರಿ ಮತ್ತು ರಾಕೇಶ್ ಶೆಟ್ಟಿಯವರ ಜಮೀನು ಅಕ್ಕಪಕ್ಕದಲ್ಲಿದ್ದು ಇಬ್ಬರು ಸೇರಿ 3 ತಿಂಗಳ ಹಿಂದೆ ತೆಂಗಿನ ಮತ್ತು 4 ದಿನ ಹಿಂದೆ ಕೋಕೋ ಸಸಿಗಳನ್ನು ನೆಟ್ಟಿದ್ದರು. ನೆಟ್ಟಿರುವ ಸಸಿಗಳ ಪೈಕಿ 74 ತೆಂಗಿನ ಸಸಿ ಮತ್ತು 100 ಕೋಕೊ ಸಸಿಗಳು ಕಳವಾಗಿದೆ. ಉತ್ತಮ ತಳಿಯ ತೆಂಗಿನ ಮತ್ತು ಕೊಕ್ಕೋ ಗಿಡಗಳಾಗಿರುವ ಕಾರಣ ಗಿಡದ ಬಗ್ಗೆ ಮಾಹಿತಿ ಇದ್ದವರೇ ಕೃತ್ಯ ನಡೆಸಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಘಟನೆ ಕುರಿತು ದೂಮ ಪೂಜಾರಿ ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.