ಅರಿಯಡ್ಕ ವಲಯ ಕಾಂಗ್ರೆಸ್‌ನಿಂದ ಮತ್ತೊಂದು ಮಾನವೀಯ ಸೇವೆ
ಪುತ್ತೂರು: ಗ್ರಾಮದಲ್ಲಿ ಬಡವರ ಪರವಾಗಿ ಅನೇಕ ಸೇವೆಗಳನ್ನು ಮಾಡುತ್ತಾ ಬಂದಿರುವ ಅರಿಯಡ್ಕ ವಲಯ ಕಾಂಗ್ರೆಸ್ ವತಿಯಿಂದ ಬಡ ಕುಟುಂಬವೊಂದರ ಮನೆ ದುರಸ್ತಿಗೆ ಧನ ಸಹಾಯ ಹಸ್ತಾಂತರ ಕಾರ್ಯ ಜೂ.3ರಂದು ನಡೆಯಿತು.

ಇದು ಅರಿಯಡ್ಕ ವಲಯ ಕಾಂಗ್ರೆಸ್ ಕಾಂಗ್ರೆಸ್ ವತಿಯಿಂದ ಈ ಬಾರಿ 6ನೇ ಅರ್ಹ ಕುಟುಂಬಕ್ಕೆ ನೀಡಲಾದ ಧನ ಸಹಾಯವಾಗಿದ್ದು ಗ್ರಾಮದಲ್ಲಿ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಬಡವರ ಪರವಾಗಿ ಅನೇಕ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು ಇದು ಗ್ರಾಮಸ್ಥರ ಪ್ರಶಂಸೆಗೂ ಪಾತ್ರವಾಗಿದೆ.
ಮಜ್ಜಾರು ನಿವಾಸಿ ಮಂಜುನಾಥ ಪೂಜಾರಿ ಎಂಬವರ ಮನೆಯ ಮಾಡು ಕುಸಿಯುವ ಭೀತಿಯಲ್ಲಿದ್ದ ಸಂದರ್ಭ ಆ ಮನೆಯವರು ಶಾಸಕ ಅಶೋಕ್ ರೈಯವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದರು. ಆ ವೇಳೆ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷರ ಜೊತೆ ಮಾತನಾಡುವಂತೆ ಶಾಸಕರು ತಿಳಿಸಿದ್ದು ಅದರಂತೆ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಅವರನ್ನು ಮಂಜುನಾಥ ಪೂಜಾರಿ ಸಂಪರ್ಕಿಸಿ ಸಹಾಯ ಯಾಚಿಸಿದ್ದರು. ಕೂಡಲೇ ಸ್ಪಂದಿಸಿದ ಇಕ್ಬಾಲ್ ಹುಸೇನ್ ಅವರು ಕೆಲವರನ್ನು ಸಂಪರ್ಕಿಸಿ ಧನ ಸಂಗ್ರಹ ಮಾಡಿದ್ದು ಒಟ್ಟು ರೂ.15 ಸಾವಿರ ಮೊತ್ತವನ್ನು ಸಂಗ್ರಹಿಸಿ ಮಂಜುನಾಥ ಪೂಜಾರಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಕಾಂಗ್ರೆಸ್ ಮುಖಂಡ ಸಾರ್ಥಕ್ ರೈ ಅರಿಯಡ್ಕ, ದಾನಿ ಸದಾಶಿವ ರೈ ಪಯಂದೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಡವರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ನಿಜವಾದ ಧರ್ಮ ಎಂದು ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ತಿಳಿಸಿದರು.






