ಪುತ್ತೂರು ದಾರುಲ್ ಹಸನಿಯಾ ನೂತನ ಕಟ್ಟಡ ಉದ್ಘಾಟನಾ
ಸಮಾರಂಭದ ಪೋಸ್ಟರ್ ‘ಸಮಸ್ತ’ ಕೇಂದ್ರ ಕಾರ್ಯಾಲಯದಲ್ಲಿ ಬಿಡುಗಡೆ
ಪುತ್ತೂರು: ಪುತ್ತೂರು ಎಜು ಪಾರ್ಕ್ನಲ್ಲಿ ನೂತನವಾಗಿ ನಿರ್ಮಿಸಲಾದ ದಾರುಲ್ ಹಸನಿಯಾ ಅಕಾಡೆಮಿಯ ಹಿಫ್ಲುಲ್ ಕುರ್ ಆನ್ ಮತ್ತು ಎಸ್.ಎನ್.ಇ.ಸಿ.ಯ ಕಟ್ಟಡದ ಉದ್ಘಾಟನಾ ಸಮಾರಂಭ ಆ.19ರಂದು ನಡೆಯಲಿದ್ದು ಅದರ ಪೋಸ್ಟರ್ನ್ನು ‘ಸಮಸ್ತ’ದ ಕೇಂದ್ರ ಕಾರ್ಯಾಲಯ ಕೋಝಿಕ್ಕೋಡ್ ಸುಪ್ರಭಾತ ಹಾಲ್ನಲ್ಲಿ ನಡೆಯಿತು.

ಸಮಸ್ತ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಮತ್ತು ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಪ್ರಧಾನ ಕಾರ್ಯದರ್ಶಿ ಶೈಖುನಾ ಎಂ.ಟಿ.ಅಬ್ದುಲ್ಲಾ ಉಸ್ತಾದ್ ಅವರು ಪೋಸ್ಟರ್ ಬಿಡುಗಡೆಗೊಳಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕರೆ ನೀಡಿದರು. ಸಮಸ್ತದ ಕೇಂದ್ರ ಮುಶಾವರದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಕರ್ನಾಟಕದಿಂದ ಕೇಂದ್ರ ಮುಶಾವರ ಸದಸ್ಯರಾದ ಬಂಬ್ರಾಣ ಉಸ್ತಾದ್, ತೋಡಾರ್ ಉಸ್ತಾದ್, ಕೊಡಗು ಅಬ್ದುಲ್ಲಾ ಫೈಝಿ ಮತ್ತು ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ಉಪಸ್ಥಿತರಿದ್ದರು. ದಾರುಲ್ ಹಸನಿಯಾ ಅಕಾಡೆಮಿಯ ಪ್ರತಿನಿಧಿಗಳಾದ ಹಸನ್ ಹಾಜಿ ಸಿಟಿ ಬಝಾರ್, ಅನ್ವರ್ ಮುಸ್ಲಿಯಾರ್ ಮೊಟ್ಟೆತ್ತಡ್ಕ, ಅಬ್ದುಲ್ ಕರೀಂ ದಾರಿಮಿ ಕುಂಬ್ರ, ಕೆ.ಎಂ.ಎ.ಕೊಡುಂಗಾಯಿ ಮೊದಲಾದವರು ಸಮಸ್ತ ಕೇಂದ್ರ ಮುಶಾವರ ಸದಸ್ಯರಿಗೆ ಆಮಂತ್ರಣ ಪತ್ರಿಕೆ ನೀಡಿದರು.






