ಕಾರ್ಮಿಕ ದಿನಾಚರಣೆ: ಎಸ್.ಡಿ.ಟಿ.ಯು ಆಟೋ ಯೂನಿಯನ್‌ನಿಂದ ಪ್ರಜ್ಞಾ ಆಶ್ರಮದಲ್ಲಿ ಹಣ್ಣು ಹಂಪಲು ವಿತರಣೆ

ಪುತ್ತೂರು: ಕಾರ್ಮಿಕರ ದಿನಾಚರಣೆ ಪ್ರಯುಕ್ತ ಎಸ್.ಡಿ.ಟಿ.ಯು ಆಟೋ ಯೂನಿಯನ್ ವತಿಯಿಂದ ಬಿರುಮಲೆ ಪ್ರಜ್ಞಾ ಆಶ್ರಮದಲ್ಲಿ ಹಣ್ಣು ಹಂಪಲು ವಿತರಿಸಲಾಯಿತು. ಆಶ್ರಮದ ಉಸ್ತುವಾರಿಗಳಾದ ಜ್ಯೋತಿ ಹಾಗೂ ಅಣ್ಣಪ್ಪ ಅವರನ್ನು ಸನ್ಮಾನಿಸಿ ಗೌರವವಿಸಲಾಯಿತು.

ಎಸ್.ಡಿ.ಟಿ.ಯು ಪುತ್ತೂರು ಇದರ ಉಪಾಧ್ಯಕ್ಷ ಆಸೀಫ್ ಉಪ್ಪಿನಂಗಡಿ, ಪ್ರ.ಕಾರ್ಯದರ್ಶಿ ಇಲ್ಯಾಸ್ ಪೋಳ್ಯ, ಜೊತೆ ಕಾರ್ಯದರ್ಶಿ ರಹ್ಮಾನ್ ಪಡೀಲ್ ಎಸ್.ಡಿ.ಟಿ.ಯು ಟ್ರೇಡ್ ಯೂನಿಯನ್ ಸದಸ್ಯರಾದ ಮಹಮ್ಮದ್ ಕುಂಞಿ ಬಾಬಾ ಹಾಗೂ ನೌಶಾದ್ ಸಾಲ್ಮರ, ಮಾಜಿ ಅಧ್ಯಕ್ಷ ಬಾತೀಶ್ ಬಡಕೋಡಿ ಹಾಗೂ ಅಲ್ ನಜತ್ ಮುಸ್ಲಿಂ ಯೂಥ್ ಪೇಡರೇಶನ್‌ನ ಉಪಾಧ್ಯಕ್ಷ ಇರ್ಷಾದ್ ಸರ್ವೆ, ಎಸ್.ಡಿ.ಟಿ.ಯು ಆಟೋ ಯೂನಿಯನ್ ಪುತ್ತೂರು ಇದರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.




