ದೊಡ್ಡಡ್ಕದಲ್ಲಿ ಅಪಘಾತ: ಕಾರು ಚಾಲಕ ಮೃತ್ಯು
ಸುಳ್ಯ: ಸಂಪಾಜೆಯ ದೊಡ್ಡಡ್ಕದಲ್ಲಿ ನಡೆದ ಅಪಘಾತದಲ್ಲಿ ನಡೆದ ಕಾರು ಚಾಲಕ ವಿರಾಜಪೇಟೆ ಸಮೀಪದ ನಿವಾಸಿ ಗಣೇಶ್ ಬಿ.ಆರ್. ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಅಪಘಾತ ನಡೆದ ಬಳಿಕ ಗಾಯಾಳುವನ್ನು ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ತರಲಾಯಿತಾದರೂ ಫಲಕಾರಿಯಾಗದೇ ಅವರು ಮೃತಪಟ್ಟರು ಎನ್ನಲಾಗಿದೆ. ಕಾರಿನಲ್ಲಿ ಇತರರು ಅಪಾಯದಿಂದ ಪಾರಾಗಿದ್ದಾರೆ
ಗಣೇಶ್ ರವರ ಮಗ ಪ್ರಶಾಂತ್ ರವರು ದುಬೈಗೆ ಹೋಗುವವರಿದ್ದರು. ಅವರನ್ನು ಮಂಗಳೂರು ಏರ್ ಪೋರ್ಟ್ ಗೆ ಬಿಟ್ಟು ವಿರಾಜಪೇಟೆ ಗೆ ವಾಪಾಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.