ಕರಾವಳಿ

ಕುಂಬ್ರ ಮರ್ಕಝುಲ್ ಹುದಾ ಕಾಲೇಜು ಬಸ್: ಬೆಳ್ಳಿವರ್ಷದ ಭಾಗವಾಗಿ ‘ಬೇಜ್ ಪ್ಲಾನ್’ ವಿವಿಧ ಕೊಡುಗೆಗಳು



ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಿಂದ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ವಿವಿಧ ಭಾಗಗಳಿಗೆ  ಬಸ್ ಸೌಕರ್ಯ ಏರ್ಪಡಿಸಲಾಗಿದ್ದು ಸುರಕ್ಷಿತ ಮತ್ತು ನೆಮ್ಮದಿಯ ಪ್ರಯಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.


ಸಂಸ್ಥೆಯ ಸಿಲ್ವರ್ ಜ್ಯುಬ್ಲಿ ವರ್ಷ ಭಾಗವಾಗಿ ಬಸ್ ಪ್ರಯಾಣಕ್ಕೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಬೇಜ್ ಹೆಸರಿನಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ.
ವಾರ್ಷಿಕ ಎರಡು ಉಚಿತ ಟೂರ್ ಗಳು, ಬಸ್ ನಲ್ಲಿ ಲೈಬ್ರರಿ, ಸ್ವೀಟ್ ಆಚರಣೆ, ಬಸ್ ಡೇ ಸಹಿತ ಆಕರ್ಷಕ ಕೊಡುಗೆಗಳು ಬೇಜ್ ಒಳಗೊಂಡಿದೆ. ಅಲ್ಲದೆ ಎರಡು ಬಸ್ ಸದಸ್ಯರನ್ನು ನೋಂದಾಯಿಸಿದವರಿಗೆ ಭಾರೀ ರಿಯಾಯಿತಿಯೂ ಈ ಪ್ಲಾನ್ ನಲ್ಲಿದೆ ಎಂದು ಮೀಡಿಯಾ ಮರ್ಕಝ್ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!