ಕರಾವಳಿರಾಜಕೀಯರಾಷ್ಟ್ರೀಯ

ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಅಶೋಕ್ ರೈ ಚುನಾವಣಾ  ಪ್ರಚಾರ, ಮತಯಾಚನೆ

ಪುತ್ತೂರು:ಮಂಜೇಶ್ವರ ಶಾಶಕ ಎ ಕೆ ಎಂ ಅಶ್ರಫ್‌ರವರು  ಓರ್ವ ಅಭಿವೃದ್ದಿ ಚಿಂತನೆಯುಳ್ಳ ರಾಜಕಾರಣಿ, ಸರ್ವ ಧರ್ಮ ಹಾಗೂ ಸರ್ವ ಧರ್ಮಿಯರನ್ನು ಸಮಾನವಾಗಿ ಗೌರವದಿಂದ ಕಾಣುವ ಅವರು ಕಳೆದ ಐದು ವರ್ಷಗಳಿಂದ ಕ್ಷೇತ್ರದ  ಅಭಿವೃದ್ದಿಗೆ ಹಗಲಿರುಳು ಕೆಲಸ ಮಾಡಿದವರು ಇವರನ್ನು ಈ ಬಾರಿ ಮತ ಹಾಕುವ ಮೂಲಕ ಗೆಲ್ಲಿಸಬೇಕು ಇವರನ್ನು  ಕಳೆದುಕೊಂಡಲ್ಲಿ ಮಂಜೇಶ್ವರದ ಜನತೆ ಪಶ್ಚತ್ತಾಪ್ಪ  ಪಡಬೇಕಾದೀತು ಎಂದು ಪುತ್ತೂರು ಶಾಸಕ ಅಶೋಕ್ ರೈ  ಹೇಳಿದರು.

ಅವರು ಕೇರಳದ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ  ಯುಡಿಎಫ್ ಅಭ್ಯರ್ಥಿ ಎ ಕೆ ಎಂ ಅಶ್ರಫ್‌ರವರ ಪರ  ಚುನಾವಣಾ ಪ್ರಚಾರ ಹಾಗೂ ಮತಯಾಚನೆ ನಡೆಸಿ  ಮಾತನಾಡಿದರು. ಕ್ಷೇತ್ರದ ಪಳ್ಳಂ, ಉಕ್ಕಿನಡ್ಕ, ಬನ್ಪುತ್ತಡ್ಕ, ಕಜಂಬಾಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮತಪ್ರಚಾರ ನಡೆಸಿದರು.

5 ವರ್ಷದಲ್ಲಿ ಶಾಸಕ ಎಕೆಎಂ ಅಶ್ರಫ್‌ರವರು ಕ್ಷೇತ್ರಕ್ಕೆ 560 ಕೋಟಿ ಅನುದಾನವನ್ನು ತಂದಿದ್ದಾರೆ, ಕ್ಷೇತ್ರದ ಜನತೆಯ ಪರವಾಗಿ ಕೇರಳ ವಿಧಾನಸಭೆಯನ್ನು ಶಬ್ದವೆತ್ತಿ ಮಾತನಾಡಿದ್ದಾರೆ. ಓರ್ವ ಶಾಶಕನಾದವ ಹೇಗಿರಬೇಕೆಂದು ಎಂಬುದಕ್ಕೆ ಇವರು ಮಾದರಿಯಾಗಿದ್ದಾರೆ. ಎಲ್ಲಾ ವಿಚಾರದಲ್ಲೂ ಅವರು  ಜನರೊಂದಿಗೆ ಬೆರೆತು ಕೆಲಸ ಮಾಡುವ ಸಜ್ಜನ  ರಾಜಕಾರಣಿಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ  ಅತ್ಯಧಿಕ ಬಹುಮತದಿಂದ ಗೆಲ್ಲಿಸಬೇಕು, ಮಂಜೇಶ್ವರಕ್ಕೆ  ಮಂಜೇಶ್ವರದವರೇ ಶಾsaಕರಾಗಲಿ ಎಲ್ಲಿಂದಲೋ ಬಂದು  ವಿಷ ಬೀಜ ಬಿತ್ತುವವರಿಗೆ ಮಣೆ ಹಾಕಬೇಡಿ ಎಂದು ಮನವಿ ಮಾಡಿದರು.


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್‌ರವರು ಮಾತನಾಡಿ ಈ ಬಾರಿಯ ಚುನಾವಣೆಯಲ್ಲಿ ಕೇರಳದಲ್ಲಿ  ಎಲ್‌ಡಿಎಫ್ ಮಣ್ಣು ಮುಕ್ಕಲಿದೆ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬರುವುದು  ನಿಶ್ಚಿ. ಮಂಜೇಶ್ವರದಲ್ಲಿ ಯುಡಿಎಫ್ ಜಯಗಳಿಸಲಿದೆ.  ಕೋಮುವಾದಿಗಳು ಬಂದು ಕೇರಳದ ಮಣ್ಣಿನಲ್ಲಿ  ಮತಾಂಧತೆಯನ್ನು ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ.  ಎಲ್ಲಾ ಧರ್ಮದವರೂ ಸಹೋದರತಯಿಂದ ಬಾಳಿ ಬದುಕುವ ಕೇರಳದಲ್ಲಿ ಕೋಮುವಾದ ನಡೆಯುವುದಿಲ್ಲ ಅದಕ್ಕೆ  ಕೇರಳದ ಜನತೆಯ ಬೆಂಬಲವೂ ಇಲ್ಲ. ಎಲ್ಲರನ್ನೊಳಗೊಂಂಡ ಸೌಹಾರ್ಧದ ಕೇರಳಕ್ಕಾಗಿ ಎ ಕೆ ಎಂ ಅಶ್ರಫ್‌ರವರನ್ನು  ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಶಾಸಕರ ಜೊತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ,  ಕರ್ನಾಟಕ ರಾಜ್ಯ  ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ, ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರ್ಷದ್ ದರ್ಬೆ,  ಪಕ್ಷದ ಮುಖಂರಾದ  ರಾಕೇಶ್ ರೈ ಕುದ್ಕಾಡಿ, ಬಶೀರ್ ಪರ್ಲಡ್ಕ,  ನವೀನ್ ರೈ  ಬನ್ನೂರು,ಅದ್ದು ಪಡೀಲ್, ಹಕೀಂ ಬೊಳುವಾರು, ಕರೀಂ ಕುದ್ದುಪದವು,  ಅಬ್ಬು ನವಗ್ರಾಮ, ಗರೀಶ್ ಸಂಟ್ಯಾರ್, ಸಲಾಂ ಸಂಪ್ಯ, ಮೋನು ಬಪ್ಪಳಿಗೆ ಮೊದಲಾದವರು ಉಪಸ್ಥಿತರಿದ್ದರು. ಶಾಸಕರು  ಅಂಗಡಿಗೆ, ಮನೆಗೆ ತೆರಳಿ ಮತಯಚನೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!