ಕರಾವಳಿ

ಉಪ್ಪಿನಂಗಡಿ: ಉಬಾರ್ ಡೋನರ್ಸ್ ಹೆಲ್ಪ್ ಲೈನ್ ವತಿಯಿಂದ ಅರ್ಹ ಕುಟುಂಬಗಳಿಗೆ ರಂಜಾನ್ ಕಿಟ್ ವಿತರಣೆ

ಉಪ್ಪಿನಂಗಡಿ: ಉಬಾರ್ ಡೋನರ್ಸ್ ಹೆಲ್ಪ್ ಲೈನ್ ಉಪ್ಪಿನಂಗಡಿ ಇದರ ವತಿಯಿಂದ ಕಳೆದ ಹತ್ತು ವರ್ಷಗಳಿಂದ ರಂಜಾನ್ ಸಮಯದಲ್ಲಿ  ಅರ್ಹರಿಗೆ ಆಹಾರದ ಕಿಟ್ ವಿತರಣೆಯ ಕಾರ್ಯಕ್ರಮ ನಡೆಯುತ್ತಿದ್ದು ಅದರಂತೆ ಈ ಬಾರಿಯೂ ನಡೆಯಿತು.

ಅಧ್ಯಕ್ಷತೆಯನ್ನು ವಹಿಸಿದ್ದ ಮಾಲೀಕುದ್ದಿನಾರ್ ಜುಮಾ ಮಸೀದಿ ಉಪ್ಪಿನಂಗಡಿ ಇದರ ಅಧ್ಯಕ್ಷರಾದ ಹಾಜಿ ಎಚ್ ಯೂಸುಫ್ ಹಾಜಿ ಮಾತನಾಡಿ ಅರ್ಹರಿಗೆ ಆಹಾರವನ್ನು ತಲುಪಿಸುವ ಜೊತೆಗೆ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡ ಹೆಣ್ಣು ಮಕ್ಕಳ ಮದುವೆಯನ್ನು ಕೂಡಾ ಮುಂದಕ್ಕೆ ನೀವು ಮಾಡಬೇಕು ಎಂದು ಅವರು ಹೇಳಿದರು.



ಸಮಾರಂಭದಲ್ಲಿ ಬಿಲಾಲ್ ಮಸೀದಿ ಕಡವಿನಬಾಗಿಲು ಖತೀಬರಾದ ಇಸ್ಮಾಯಿಲ್ ರಿಝ್ವಿಯವರು ದುವಾ ಪ್ರಾರ್ಥನೆಗೈದರು. ಸಮಾರಂಭದಲ್ಲಿ ಮಾತನಾಡಿದ ಹಿರಿಯ ಸಹಕಾರಿಯೂ ನಿವೃತ್ತ ಶಿಕ್ಷಕರಾದ ವಿನ್ಸೆಂಟ್ ಫೆರ್ನಾಂಡಿಸ್ ರವರು ಸಂಸ್ಥೆಯ ಸೇವಾಕಾರ್ಯವನ್ನು ಶ್ಲಾಘಿಸಿದರು. ನಝೀರ್ ಹೊಸಮೊಗ್ರುರವರು ಸಂಸ್ಥೆಯ ಹೊಸ ಶೈಕ್ಷಣಿಕ ಕ್ರಾಂತಿಯ ಬಗ್ಗೆ ತಿಳಿಸಿದರು.



ಸಮಾರಂಭದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಇಸುಬು ಪೆದಮಾಲೆ, ಹಮೀದ್ ಎಂ ಜಿ ಸಿಟಿ ಸೆಂಟರ್, ಮುಸ್ತಫಾ ಡಬಲ್ ಫೋರ್, ಇಸ್ಮಾಯಿಲ್ ತಂಙಳ್, ಅಶ್ರಫ್ ಹಾಜಿ ಸಿಟಿ, ಹಾರೂನ್ ಅಗ್ನಾಡಿ, ರವೂಫ್ ಹಾಜಿ ಯು ಟಿ, ಅದ್ದು ಬಜಾರ್, ಮಹಮ್ಮದ್ ಕೆಂಪಿ, ಅಶ್ರಫ್ ಡಿಸೈನ್, ಬಶೀರ್ ಪೆರಿಯಡ್ಕ, ಸಿದ್ದೀಕ್ ನಿರಾಜೆ, ಶುಕೂರ್ ಕುಪ್ಪೆಟ್ಟಿ, ಇಸಾಕ್ ಹಳೆಗೇಟು, ಆಚಿ ಇಬ್ರಾಹಿಂ, ಖಲಂದರ್ ಕೊಳ್ಳೆಜಾಲ್, ರಹಿಮಾನ್ ಪೊರುಂಕಾಜೆ, ಮುನೀರ್ ಎನ್ಮಾಡಿ, ಜಮಾಲ್ ಕೆಂಪಿ, ಸಿದ್ದೀಕ್ ಕೆಂಪಿ, ಫೌಝರ್ ಯು ಟಿ, ಇಕ್ಬಾಲ್ ಹಳೆಗೇಟು, ಅನೀಸ್ ಗಾಂಧಿಪಾರ್ಕ್, ಶಾನಿಲ್ ಬಸ್ತಿಕ್ಕಾರ್, ಮನ್ಸೂರ್ ಕುದ್ಲೂರ್, ರಫೀಕ್ ಮಾಸ್ಟರ್, ಸಿದ್ದೀಕ್ ಹ್ಯಾಪಿ ಟೈಮ್ಸ್, ಶುಕೂರ್ ಮೇದರಬೆಟ್ಟು, ಇಬ್ರಾಹಿಂ ಸಿಟಿ, ಸಮದ್ ಕೆಂಪಿ, ಲತೀಫ್ ಕುದ್ಲೂರ್, ಫಯಾಝ್ ಯು ಟಿ, ಮಹಮ್ಮದ್ ಕಡವಿನಬಾಗಿಲು ಮತ್ತಿತರರು ಪಾಲ್ಗೊಂಡಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಶಬೀರ್ ಕೆಂಪಿ,
ಸಂಸ್ಥೆಯ ಗೌರವ ಸಲಹೆಗಾರರಾದ ಮಹಮ್ಮದ್ ತೌಸೀಫ್ ಯು ಟಿ ಮತ್ತು ಇರ್ಷಾದ್ ಯು ಟಿ ಹಾಗೂ ಜಲೀಲ್ ಮುಕ್ರಿಯವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!