ಸಚಿವರಾಗ್ತಾರಾ ಅಶೋಕ್ ರೈ
ಬೆಂಗಳೂರು: ಮೊದಲ ಬಾರಿಗೆ ಆಯ್ಕೆಯಾಗಿರುವ 31 ಕಾಂಗ್ರೆಸ್ ಶಾಸಕರು ಸಂಪುಟ ಪುನರ್ ರಚನೆಯ ಸಂದರ್ಭದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಹೈಕಮಾಂಡಿಗೆ ಪತ್ರ ಬರೆದಿದ್ದು 31 ಶಾಸಕರ ಪೈಕಿ ಕನಿಷ್ಠ ಐದು ಮಂದಿಗೆ ಸಚಿವ ಸ್ಥಾನ ನೀಡಬೇಕೆಂದು ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಐದು ಮಂದಿ ಶಾಸಕರ ಪೈಕಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮೊದಲ ಸ್ಥಾನದಲ್ಲಿದ್ದಾರೆ ಎನ್ನಲಾಗಿದ್ದು ಎಐಸಿಸಿ ನಡೆಸಿದೆ ಎನ್ನಲಾದ ರಹಸ್ಯ ಸಮೀಕ್ಷೆಯಲ್ಲಿಯೂ ಶಾಸಕ ಅಶೋಕ್ ರೈ ಅವರ ಹೆಸರು ಮುನ್ನೆಲೆಗೆ ಬಂದಿದೆ ಎಂದು ವರದಿಯಾಗಿದೆ. ಈಗಾಗಲೇ ಪ್ರಥಮ ಬಾರಿ ಆಯ್ಕೆ ಆಗಿರುವ ಶಾಸಕರ ಪೈಕಿ ಅಶೋಕ್ ರೈ ಅವರು ತಮ್ಮ ಕಾರ್ಯ ವೈಖರಿ ಮೂಲಕ ರಾಜ್ಯದ ಗಮನ ಸೆಳೆದಿದ್ದು ಸಿಎಂ ಹಾಗೂ ಡಿಸಿಎಂ ಜೊತೆಗೂ ನಿಕಟ ಸಂಪರ್ಕ ಹೊಂದಿದ್ದಾರೆ. ಪುತ್ತೂರು ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಪುತ್ತೂರಿಗೆ ಮೆಡಿಕಲ್ ಕಾಲೇಜು ತರುವಲ್ಲಿ ಯಶಸ್ವಿಯಾಗಿರುವ ಅಶೋಕ್ ರೈ ಅವರ ಕಾರ್ಯಕ್ಷಮತೆ ದೆಹಲಿ ಮಟ್ಟದಲ್ಲೂ ಚರ್ಚೆಯಾಗಿದೆ ಎನ್ನಲಾಗುತ್ತಿದೆ.
ಇದೀಗ ಸಚಿವ ಸ್ಥಾನ ಸಿಗುವ ಕುರಿತು ಚರ್ಚೆ ನಡೆಯುತ್ತಿದ್ದು ಅಶೋಕ್ ರೈ ಅವರು ಸಚಿವರಾಗಲಿ ಎಂದು ಅವರ ಅಭಿಮಾನಿಗಳು, ಬೆಂಬಲಿಗರು ಕಾಯುತ್ತಿದ್ದಾರೆ.




