ನೂತನ ವಸ್ತ್ರ ಮಳಿಗೆ ತೆರೆಯುವ ಸಂಭ್ರಮದಲ್ಲಿದ್ದ ಯುವಕ ವಿದ್ಯುತ್ ಆಘಾತಕ್ಕೀಡಾಗಿ ಮೃತ್ಯು
ಮಂಗಳೂರು: ನೂತನ ವಸ್ತ್ರ ಮಳಿಗೆಯೊಂದನ್ನು ತೆರೆಯುವ ಸಂಭ್ರಮದಲ್ಲಿದ್ದ ಯುವಕನೋರ್ವ ಅದೇ ಮಳಿಗೆಯಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ತೊಕ್ಕೊಟ್ಟುವಿನ ಹೃದಯಭಾಗದ ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿ ಸೋಮವಾರ ಮುಂಜಾನೆ ವರದಿಯಾಗಿದೆ.

ಮಂಗಳೂರಿನ ಪಾಂಡೇಶ್ವರ ಶಿವನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ನೆಲೆಸಿದ್ದ ಸಲ್ಮಾನ್ ಫಾರಿಶ್ (20) ಮೃತ ಯುವಕ. ಮಂಗಳೂರಿನ ಬಂದರ್ ಲಕ್ಷ್ಮೀ ಎಂಟರ್ ಪ್ರೈಸಸ್ ನಲ್ಲಿ ಉದ್ಯೋಗಿಯಾಗಿದ್ದ ಸಲ್ದಾನ್ ಫಾರಿಕ್ ತೊಕ್ಕೊಟ್ಟಿನ ಖಾಸಗಿ ನೂತನ ವಸ್ತ್ರ ಮಳಿಗೆ ತೆರೆಯುವ ಸಿದ್ಧತೆ ವೇಳೆ ಘಟನೆ ನಡೆದಿದೆ.
ವಾಣಿಜ್ಯ ಮಳಿಗೆಯಲ್ಲಿ ತನ್ನ ಸಹೋದರ ಹಾಗೂ ಸ್ನೇಹಿತನ ಜತೆಗೂಡಿ ನೂತನ ವಸ್ತ್ರ ಮಳಿಗೆಯೊಂದನ್ನು ಫೆ.27ರಂದು ತೆರೆಯಲು ನಿರ್ಧರಿಸಿದ್ದು, ಇದಕ್ಕಾಗಿ ತಯಾರಿ ನಡೆಸುತ್ತಿದ್ದರು.




