ಈಶ್ವರಮಂಗಲದ ಅಬ್ಕೋ ಗೋಲ್ಡ್ ಚಿನ್ನಾಭರಣ ಮಳಿಗೆಯಲ್ಲಿ ವಾರದ ಅದೃಷ್ಟ ಡ್ರಾ
ಪುತ್ತೂರು: ಈಶ್ವರಮಂಗಲದ ಅಬ್ಕೋ ಗೋಲ್ಡ್ ಚಿನ್ನಾಭರಣ ಮಳಿಗೆ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಹಿನ್ನೆಲೆಯಲ್ಲಿ ನ.25ರಿಂದ ಜ.13ರ ವರೆಗೆ ವಿಶೇಷ ಆಫರ್ ಪ್ರಕಟಿಸಲಾಗಿದ್ದು ಮಳಿಗೆಯಲ್ಲಿ ಶಾಪಿಂಗ್ ಮಾಡಿದವರಿಗೆ ಕೂಪನ್ ಲಭಿಸುತ್ತಿದ್ದು ಚಿನ್ನದ ನಾಣ್ಯ ಹಾಗೂ ಬೆಳ್ಳಿಯ ನಾಣ್ಯಗಳನ್ನು ಗೆಲ್ಲವ ಅವಕಾಶ ಕಲ್ಪಿಸಲಾಗಿದೆ. ವಾರದ ಪ್ರಥಮ ಡ್ರಾ ಡಿ.2ರಂದು ಮಳಿಗೆಯಲ್ಲಿ ನಡೆಯಿತು.
ಅದೃಷ್ಟ ಡ್ರಾದಲ್ಲಿ ಪ್ರಥಮ ಬಹಮಾನವಾದ ಚಿನ್ನದ ನಾಣ್ಯವನ್ನು ಮರಿಯಮ್ಮ ಅಮ್ಚಿನಡ್ಕ ಪಡೆದುಕೊಂಡರೆ, ದ್ವಿತೀಯ ಬಹುಮಾನವಾದ ಬೆಳ್ಳಿಯ ನಾಣ್ಯವನ್ನು ಸುಂದರಿ ಬೆದ್ರಾಡಿ ಕರ್ನೂರು ಪಡೆದುಕೊಂಡರು.