ಸುಳ್ಯ: ಚಪ್ಪಲಿಯೊಳಗೆ ಅವಿತುಕೊಂಡಿದ್ದ ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾದ ಮಹಿಳೆ
ಸುಳ್ಯ: ಮನೆ ಹೊರಭಾಗದಲ್ಲಿ ಇರಿಸಿದ್ದ ಚಪ್ಪಲಿಯೊಳಗೆ ಅವಿತುಕೊಂಡಿದ್ದ ಹಾವು ಕಚ್ಚಿ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಆಲೆಟ್ಟಿ ಗ್ರಾಮ ವ್ಯಾಪ್ತಿಯ ಕೋಳ್ಚಾರು ಎಂಬಲ್ಲಿ ನಡೆದಿದೆ.

ಮಹಿಳೆ ಬೆಳಗಿನ ಜಾವ ಮನೆಯ ಹೊರಗೆ ಇರಿಸಲಾಗಿದ್ದ ಚಪ್ಪಲಿಯನ್ನು ಧರಿಸಿದ ಸಂಧರ್ಭದಲ್ಲಿ ಚಪ್ಪಲಿಯ ಒಳಗೆ ಅವಿತು ಕೊಂಡಿರುವುದು ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. ತಕ್ಷಣ ಮಹಿಳೆಯನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಇದೀಗ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.



