ಕರಾವಳಿರಾಜ್ಯ

ಸಮಾಜ ಸೇವಕ ಮುಹಮ್ಮದ್  ಕುಕ್ಕುವಳ್ಳಿ ಅವರಿಗೆ ‘ಭಾರತ ಸೇವಾ ರತ್ನ’ ಪ್ರಶಸ್ತಿ ಪ್ರದಾನ

ಪುತ್ತೂರು: ಸಮಾಜ ಸೇವಕ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಅವರು ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ನೀಡಲ್ಪಡುವ ಭಾರತ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಿದ್ದಾರೆ. ಜ.13ರಂದು ಬೆಂಗಳೂರು ವಿಶ್ವ ವಿದ್ಯಾಲಯದ ಕಲಾಗ್ರಾಮದಲ್ಲಿ ನಡೆದ 2025ನೇ ಸಾಲಿನ ಸಾಧಕರ ಸಮಾಗಮ ಕಾರ್ಯಕ್ರಮದಲ್ಲಿ ಮುಹಮ್ಮದ್ ಕುಕ್ಕುವಳ್ಳಿಯವರಿಗೆ ಗಣ್ಯರು ಪ್ರಶಸ್ತಿ ನೀಡಿ, ಸನ್ಮಾನಿಸಿ ಗೌರವಿಸಿದರು.

ಮುಹಮ್ಮದ್ ಕುಕ್ಕುವಳ್ಳಿಯವರು ಉದ್ಯಮಿಯಾಗಿದ್ದು ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ‘ಸೂರಿಲ್ಲದವರಿಗೊಂದು ಆಸರೆ’ ಯೋಜನೆಯ ಮೂಲಕ ನೂರಾರು ಕುಟುಂಬಗಳಿಗೆ ಮನೆ ನಿರ್ಮಾಣ ಸೇರಿದಂತೆ ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಿಗೆ ಸಹಾಯಹಸ್ತ ಚಾಚುತ್ತಿರುವ ಇವರು ಮಾನವೀಯ ಸೇವೆಗಳ ಮೂಲಕ ಜನಮೆಚ್ಚುಗೆ ಪಡೆದುಕೊಂಡಿದ್ದಾರೆ. ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆಗಿರುವ ಮುಹಮ್ಮದ್ ಕುಕ್ಕುವಳ್ಳಿಯವರು ತಮ್ಮ ಸಾಧನೆಗಾಗಿ ಈಗಾಗಲೇ ಹತ್ತು ಹಲವು ಪ್ರಶಸ್ತಿಗಳನ್ನು ಸನ್ಮಾನಗಳನ್ನು ಪಡೆದುಕೊಂಡಿದ್ದು ತಮ್ಮ ಸಾಧನೆಗಾಗಿ ವಿದೇಶಗಳಲ್ಲೂ ಸನ್ಮಾನಿತಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!