ಬೆಂಗಳೂರು ಕಂಬಳ ಯಶಸ್ವಿ: ಅಶೋಕ್ ರೈ ಸಂತಸ
ಐತಿಹಾಸಿಕ ಬೆಂಗಳೂರು ಕಂಬಳ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದು ಕಂಬಳ ಆಯೋಜಕರು ಫುಲ್ ಖುಷಿಯಾಗಿದ್ದಾರೆ.
ಈ ಬಗ್ಗೆ ಕಂಬಳ ಸಮಿತಿಯ ಅಧ್ಯಕ್ಷರು, ಪುತ್ತೂರು ಕ್ಷೇತ್ರದ ಶಾಸಕರೂ ಆಗಿರುವ ಅಶೋಕ್ ಕುಮಾರ್ ರೈಯವರು ಪ್ರತಿಕ್ರಿಯಿಸಿದ್ದು ಕಂಬಳ ಅಭೂತಪೂರ್ವ ಯಶಸ್ಸು ಕಂಡಿದೆ, ದೇಶ ವಿದೇಶಗಳ ಜನರು ಕಂಬಳ ವೀಕ್ಷಿಸಿದ್ದಾರೆ. ಕರಾವಳಿಕ ಸಾಂಸ್ಕೃತಿಕ ಕ್ರೀಡೆಯನ್ನು ಜಗತ್ತಿಗೆ ಗೊತ್ತುಪಡಿಸುವ ಕೆಲಸ ಆಗಿದೆ ಎಂದು ತಿಳಿಸಿದ್ದಾರೆ.
ಲಕ್ಷಾಂತರ ಜನರು ಭಾಗವಹಿಸಿದ ಅಷ್ಟು ದೊಡ್ಡ ಕಂಬಳ ಆಯೋಜನೆ ಮಾಡುವಾಗಲೂ ಒಂದಷ್ಟೂ ತೊಂದರೆಯಾಗದ ರೀತಿಯಲ್ಲಿ ಆಯೋಜನೆಯಾಗಿರುವ ಅತೀವ ಖುಷಿ ನೀಡಿದೆ ಎಂದು ಅವರು ತಿಳಿಸಿದ್ದಾರೆ. ಕಂಬಳ ಸಮಿತಿಯವರ ವಿಶೇಷ ತ್ಯಾಗ ಮತ್ತು ಪರಿಶ್ರಮ, ಹಾಗೆಯೇ ಎಲ್ಲರ ಸಹಕಾರದಿಂದ ಕಂಬಳ ಆಯೋಜನೆ ಯಶಸ್ವಿಯಾಗಿದೆ, ರಾಜ್ಯ ರಾಜಧಾನಿಯಲ್ಲಿ ಕಂಬಳ ಆಯೋಜನೆಗೊಂಡಿರುವುದು ಎಲ್ಲರೂ ಸಂತೋಷ ತಂದಿದೆ ಎಂದು ಅವರು ತಿಳಿಸಿದ್ದಾರೆ.