ಕೆಟ್ಟು ಹೋದ ರಸ್ತೆ: ಏಕ ವ್ಯಕ್ತಿಯಿಂದ ಶ್ರಮದಾನ
ಪುತ್ತೂರು: ಒಳಮೊಗ್ರು ಗ್ರಾಮದ ಕೊಯಿಲತ್ತಡ್ಕದಿಂದ ಕಡ್ತಿಮಾರ್ ಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ದ್ವಿಚಕ್ರ ವಾಹನದ ಸಂಚಾರಕ್ಕೂ ಅಡಚಣೆಯಾಗಿದೆ. ರಸ್ತೆಗೆ ಮಣ್ಣು ಹಾಕಿಯಾದರೂ ದುರಸ್ಥಿ ಮಾಡಿ ಎಂದು ಸ್ಥಳೀಯ ನಿವಾಸಿ ಬಶೀರ್ ಕಡ್ತಿಮಾರ್ ರವರು ಗ್ರಾಪಂ ಸ್ಥಳೀಯ ಸದಸ್ಯರಲ್ಲಿ ಮನವಿ ಮಾಡಿದ್ದರು.
ಮನವಿಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಮಸ್ಥ ಬಶೀರ್ ತನ್ನ ಸ್ವಂತ ಹಣದಿಂದ ಪಿಕಪ್ ನಲ್ಲಿ ಮಣ್ಣು ತರಿಸಿ ಹೊಂಡಮಯವಾದ ರಸ್ತೆಗೆ ಸುರಿದು ಅದನ್ನು ಸ್ವಯಂ ಶ್ರಮದಾನ ಮಾಡುವ ಮೂಲಕ ರಸ್ತೆಯನ್ನು ಸಂಚಾರ ಯೋಗ್ಯ ಮಾಡಿದ್ದಾರೆ. ಇವರ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಿಕ್ಷಾ ಚಾಲಕ ಬಶೀರ್ ಈ ರಸ್ತೆ ಸಂಪೂರ್ಣ ಹದಗೆಟ್ಟಿತ್ತು, ದುರಸ್ಥಿ ಮಾಡುವವರೇ ಇಲ್ಲ. ಇಲ್ಲಿ ಮಣ್ಣು ತಂದು ಹಾಕಿದರೂ ಯಾರೂ ಸಹಕಾರ ನೀಡಿಲ್ಲ ಎಂದು ತಿಳಿಸಿದ್ದಾರೆ