ಕರಾವಳಿ

ಬೂಡಿಯಾರ್: ವಿದ್ಯುತ್ ಅವಘಡದಿಂದ ಅಡಿಕೆತೋಟ ನಾಶ,  ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ

ಪುತ್ತೂರು: ಬೂಡಿಯಾರ್ ನಿವಾಸಿ ಗಣೇಶ್ ರೈ ಎಂಬವರ ಅಡಿಕೆ ತೋಟಕ್ಕೆ ಇತ್ತೀಚೆಗೆ ವಿದ್ಯುತ್ ತಂತಿ ಕಡಿದು ಬಿದ್ದು ಸುಮಾರು 1200 ಅಡಿಕೆ ಗಿಡ ನಾಶವಾಗಿದ್ದು , ಘಟನಾ  ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ ನೀಡಿದರು.

ಘಟನೆಯ ಬಗ್ಗೆ ಇಂಧನ ಸಚಿವ ಕೆ ಜೆ ಜಾರ್ಜ್ ಅವರಿಗೆ ತಿಳಿಸಲಾಗಿದ್ದು ಪರಿಹಾರವಾಗಿ 2.5 ಲಕ್ಷ ಪರಿಹಾರ ಮಂಜೂರು ಮಾಡಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು

Leave a Reply

Your email address will not be published. Required fields are marked *

error: Content is protected !!