ಇಂದು(ಜ.3) ಪುತ್ತೂರು ಬ್ಲಾಕ್ ಕಾಂಗ್ರೆಸ್‌ನಿಂದ ಮತಪಟ್ಟಿ ಪರಿಷ್ಕರಣೆಯ ತರಬೇತಿ ಕಾರ್ಯಕ್ರಮ
ಪುತ್ತೂರು: ಬ್ಲಾಕ್ ಕಾಂಗ್ರೆಸ್ ಪುತ್ತೂರು ಇದರ ವತಿಯಿಂದ ಪಕ್ಷದ ಬೂತ್ ಅಧ್ಯಕ್ಷರಿಗೆ, ಬಿಎಲ್‌ಎಗಳಿಗೆ, ವಲಯ ಅಧ್ಯಕ್ಷರುಗಳಿಗೆ ಮತಪಟ್ಟಿ ಪರಿಷ್ಕರಣೆಯ ತರಬೇತಿ ಕಾರ್ಯಕ್ರಮ ಜ.3ರಂದು ಪೂರ್ವಾಹ್ನ 11.30ಕ್ಕೆ ಬ್ಲಾಕ್ ಕಾಂಗ್ರೆಸ್ ಕಚೇರಿಯ ಮೇಲ್ಬಾಗದ ವಿದ್ಯಾಮಾತ ಸಭಾಂಗಣದಲ್ಲಿ ನಡೆಯಲಿದೆ.

ಶಾಸಕ ಅಶೋಕ್ ಕುಮಾರ್ ರೈಯವರ ಮಾರ್ಗದರ್ಶನದಲ್ಲಿ ನಡೆಯುವ ಈ ತರಬೇತಿ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ತರಬೇತುದಾರ ಮಹಮ್ಮದ್ ನವಾಜ್ ತರಬೇತಿ ನೀಡಲಿದ್ದಾರೆ. ಪಕ್ಷದ ಬೂತ್ ಅಧ್ಯಕ್ಷರು, ಬಿಎಲ್‌ಎ, ವಲಯ ಅಧ್ಯಕ್ಷರುಗಳು ಭಾಗವಹಿಸುವಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ತಿಳಿಸಿದ್ದಾರೆ.



