ಪುತ್ತೂರು: ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಬಂಧನ
ಪುತ್ತೂರು: ಜ.1ರಂದು ಬೆಳಿಗ್ಗೆ, ಪುತ್ತೂರು ಕಸಬಾ ಗ್ರಾಮದ ಪರ್ಲಡ್ಕ ಜಂಕ್ಷನ್ ಎಂಬಲ್ಲಿ ವ್ಯಕ್ತಿಯೋರ್ವ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ಪುತ್ತೂರು ನಗರ ಠಾಣಾ ಪಿ.ಎಸ್.ಐ ಜನಾರ್ಧನ ಕೆ.ಎಂ ರವರು ಸಿಬ್ವಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ, ಆತನನ್ನು ತಡೆದು ವಿಚಾರಿಸಿದಾಗ, ನಿಷೇಧಿತ ಗಾಂಜಾ ಇರಿಸಿಕೊಂಡಿದ್ದ ಪುತ್ತೂರು ಕಸಬಾ ಗ್ರಾಮ ನಿವಾಸಿ ಮಹಮ್ಮದ್ ತೌಸೀಫ್ (36) ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆತನನ್ನು ತಪಾಸಣೆ ನಡೆಸಿದಾಗ 400 ಗ್ರಾಂ ಗಾಂಜಾ ಪತ್ತೆಯಾಗಿರುತ್ತದೆ. ಮುಂದಿನ ಕಾನೂನು ಕ್ರಮಕ್ಕಾಗಿ ಆತನನ್ನು ವಶಕ್ಕೆ ಪಡೆದು ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 02/2026, ಕಲಂ:8(ಸಿ), 20(ಬಿ) ಎನ್‌ಡಿಪಿಎಸ್ ಆಕ್ಟ್ 1985 ರಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.




