ಕುಂಬ್ರ ಮರ್ಕಝುಲ್ ಹುದಾ ವತಿಯಿಂದ ಸಿಲ್ವರ್ ಟವರ್ ಉದ್ಘಾಟನೆ
ಪುತ್ತೂರು: ಮರ್ಕಝುಲ್ ಹುದಾ ಸಿಲ್ವರ್ ಜ್ಯೂಬಿಲಿ ಸ್ಮರಣಾರ್ಥ ನಿರ್ಮಿಸಲ್ಪಟ್ಟ ಸಿಲ್ವರ್ ಟವರ್ ಉದ್ಘಾಟನಾ ಕಾರ್ಯಕ್ರಮ ಕುಂಬ್ರ ಹಸನ್ ನಗರದಲ್ಲಿ ನಡೆಯಿತು. ಸಯ್ಯಿದ್ ಕಾಟುಕುಕ್ಕೆ ಜಮಲುಲ್ಲೈಲಿ ಇಂಬಿಚ್ಚಿಕೋಯ ತಂಙಳ್ ಸಖಾಫಿ ಉದ್ಘಾಟಿಸಿದರು. ಕುಂಬ್ರ ಮರ್ಕಝುಲ್ ಹುದಾದ ಚೇರ್ಮೆನ್ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಿದ್ದರು.

ಮಹಮೂದುಲ್ ಫೈಝಿ ಓಲೆಮುಂಡೋವು ಪ್ರಾರ್ಥನೆ ನೆರವೇರಿಸಿದರು. ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರಾದ ಬಿ.ಕೆ ಮುಹಮ್ಮದ್ ಅಲಿ ಫೈಝಿ ವಕ್ಫ್ ನೆರವೇರಿಸಿದರು. ಮರ್ಕಝುಲ್ ಹುದಾ ಥಿಯೋಲಜಿ ವಿಭಾಗದ ಪ್ರಾಂಶುಪಾಲರಾದ ವಳವೂರು ಮುಹಮ್ಮದ್ ಸಅದಿ ಹಿವಚನ ನೀಡಿದರು. ಕಾರ್ಯಾಧ್ಯಕ್ಷ ಡಾ.ಎಂಎಸ್‌ಎಂ ಅಬ್ದುರ್ರಶೀದ್ ಝೈನಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಂಸ್ಥೆಯ ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ, ಥಿಯೋಲಜಿ ವಿಭಾಗದ ಉಪಪ್ರಾಂಶುಪಾಲರಾದ ಜಲೀಲ್ ಸಖಾಫಿ ಜಾಲ್ಸೂರು, ಸಿಲ್ವರ್ ಜ್ಯೂಬಿಲಿ ಚೇರ್‌ಮೆನ್ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಅಭಿಮಾನ್ ಉಮರ್ ಹಾಜಿ ಬೆಂಗಳೂರು, ಸಮಿತಿ ಸದಸ್ಯರಾದ ಕೈಕಾರ ಯೂಸುಫ್ ಹಾಜಿ, ಸಲಾಹುದ್ದೀನ್ ಸಖಾಫಿ ಮಾಡನ್ನೂರು, ಜುನೈದ್ ಸಖಾಫಿ ಜೀರ್ಮುಖಿ, ಉಮರ್ ಹಾಜಿ ಪಟ್ಟೆ, ಅನ್ವರ್ ಹುಸೇನ್ ಗೂಡಿನಬಳಿ, ಆಶಿಕುದ್ದೀನ್ ಅಖ್ತರ್, ಯೂಸುಫ್ ಮೈದಾನಿಮೂಲೆ, ಕರೀಂ ಹಾಜಿ ಕಾವೇರಿ, ಎಸ್ ಪಿ ಬಶೀರ್ ಶೇಖಮಲೆ, ಉಸ್ಮಾನ್ ಮುಸ್ಲಿಯಾರ್, ಮುಕ್ಕೂರ್ ಅಬೂಬಕ್ಕರ್ ಮುಸ್ಲಿಯಾರ್, ಬದ್ರುದ್ದೀನ್ ಹಾಜಿ, ಅಝೀಝ್ ಸಖಾಫಿ ಕೊಳ್ತಿಗೆ, ಜಲೀಲ್ ಹಾಜಿ ಹಸನ್ ನಗರ್, ಇಬ್ರಾಹಿಂ ಹಾಜಿ ಅಜ್ಜಿಕಟ್ಟೆ, ಅಲೆಕ್ಕಾಡಿ ಇಬ್ರಾಹಿಂ ಹಾಜಿ, ಅಝೀಝ್ ಚೆನ್ನಾರ್, ಮೂಸಾ ಮುಸ್ಲಿಯಾರ್, ಇಬ್ರಾಹಿಂ ಝುಹ್ರಿ, ಹಾಶಿಮಿ ಮೈದಾನಿಮೂಲೆ, ಶಾವುಲ್ ಹಮೀದ್ ಬನ್ನೂರು, ಕುಂಞಿ ಶೇಕಮಲೆ, ತಖಿಯ್ಯ್ ಮದನಿ, ವಿ.ಕೆ ಝಕಿರ್ ಬಪ್ಪಳಿಗೆ ಮುಂತಾದವರು ಉಪಸ್ಥಿತರಿದ್ದರು. ಸಿಲ್ವರ್ ಟವರ್ ಅಭಿವೃದ್ದಿಗೆ ಸಹಕರಿಸಿದ ಪಟ್ಟೆ ಉಮರ್ ಹಾಜಿ, ಸ್ಥಳದಾನಿ ಜಲೀಲ್ ಹಾಜಿ, ಅಬ್ಬಾಸ್ ಬುರ್ಖಾ, ಉಮರ್ ಅಭಿಮಾನ್, ಕಂಟ್ರಾಕ್ಟರ್ ಶರೀಫ್ ಕೊಡುಂಗಾಯಿರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.




