ಕೊಡಗು :ಬೇಟೆಗೆ ತೆರಳಿದ್ದ ಸಂದರ್ಭ ನಾಪತ್ತೆಯಾಗಿದ್ದ ವಿನೋದ್ ಮೃತದೇಹ ಪತ್ತೆ
ಕಾವೇರಿ ನದಿಯಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾದ ಮೃತದೇಹ.
4 ದಿನಗಳಿಂದ ಕಾಣೆಯಾಗಿದ್ದ ವಿನೋದ್.

ನಂಜರಾಯಪಟ್ಟಣ ಗ್ರಾ.ಪಂ ವ್ಯಾಪ್ತಿಯ ವಿರುಪಾಕ್ಷಪುರ ನಿವಾಸಿ ಆಟೋ ಚಾಲಕ ವಿನೋದ್ ಕಳೆದ ನಾಲ್ಕು ದಿನಗಳ ಹಿಂದೆ ತನ್ನ ಸಹಚರರೊಂದಿಗೆ ಬೈಲುಕೊಪ್ಪ ಪರಿಸರದ ಕಾಡಿಗೆ ಬೇಟೆಗೆ ತೆರಳಿದ್ದ ವಿನೋದ್ (29 ವರ್ಷ) ಕಾಣೆಯಾಗಿದ್ದರು.
ಅ.10ರಂದು ಬಾಳುಗೋಡು ಸಮೀಪ ಕಾವೇರಿ ನದಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ತಮ್ಮ ಸ್ನೇಹಿತರಾದ ಧರ್ಮ, ಯೋಗೇಶ್, ಈಶ್ವರ ಎಂಬವರೊಂದಿಗೆ ಬೇಟೆಗೆ ತೆರಳಿದ್ದರು.ಗ್ರಾಮದ ನದಿ ದಾಟಿ ಬೈಲುಕೊಪ್ಪ ಪೋಲಿಸ್ ಠಾಣಾ ವ್ಯಾಪ್ತಿಯ ಕಾಡಿಗೆ ತೆರಳಿದ್ದ ಇವರು ಕಾಡಿನಿಂದ ಹಿಂದಿರುಗಿದ ಸಮಯ
ಮೂವರು ಹಿಂತಿರುಗಿದ್ದರು. ವಿನೋದ್ ರವರು ಮರಳಿ ಬಂದಿರಲಿಲ್ಲ.
ಈ ಹಿನ್ನೆಲೆಯಲ್ಲಿ ಆತನ ಪತ್ನಿ ಅನುಷಾ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು.
ಬೇಟೆಗೆ ತೆರಳಿದ್ದ ಯೋಗೇಶ್, ಈಶ್ವರ ತಲೆಮರೆಸಿಕೊಂಡರೆ, ಧರ್ಮ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಗುರುವಾರ ಬೆಳಗ್ಗೆ ಬಾಳುಗೋಡು ವ್ಯಾಪ್ತಿಯ ಕಾವೇರಿ ನದಿ ದಂಡೆಯಲ್ಲಿ ವಿನೋದನ ಮೃತದೇಹ ಪತ್ತೆಯಾಗಿದೆ.
ಬೇಟೆಗೆ ತೆರಳಿದ್ದ ಸಂದರ್ಭ ಈಶ್ಚರ ಕೋವಿಯಿಂದ ಮಿಸ್‌ಫೈರ್ ಆಗಿ ವಿನೋದನ ಎದೆ ಸೀಳಿತ್ತು ಎಂದು ತಿಳಿದುಬಂದಿದೆ .
ಮೃತದೇಹವನ್ನು ನದಿ ದಾಟಿಸಿ ತರುವ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿ ಮೃತದೇಹ ಕೊಚ್ಚಿಹೋಗಿತ್ತು.
ಈ ಹಿನ್ನಲೆಯಲ್ಲಿ ಗಾಬರಿಗೊಂಡ ಮೂವರು ಪ್ರಕರಣವನ್ನು ಗೌಪ್ಯವಾಗಿಡಲು ಪ್ರಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಮುಂದಿನ ತನಿಖೆಯನ್ನು ಪೊಲೀಸರು ನಡೆಸುತ್ತಿರುವುದಾಗಿ ತಿಳಿದು ಬಂದಿದೆ.