ಕರಾವಳಿರಾಜ್ಯ

ರಸ್ತೆ ಅಪಘಾತ-ಸುಳ್ಯದ ಯುವಕ ಸಾವು

ಸುಳ್ಯ: ಮೈಸೂರು ಬಳಿಯ ಮಳವಳ್ಳಿಯಲ್ಲಿ ಶುಕ್ರವಾರ ಮುಂಜಾನೆ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸುಳ್ಯದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.


ಮೃತರನ್ನು ಸುಳ್ಯದ ಉಬರಡ್ಕ ಮಿತ್ತೂರು ಗ್ರಾಮದ ಕಲ್ಚಾರ್ ನಿವಾಸಿ ದೀಕ್ಷಿತ್ (25) ಎಂದು ಗುರುತಿಸಲಾಗಿದೆ. ದೀಕ್ಷಿತ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಬೆಂಗಳೂರಿನಿಂದ ಕಂದಡ್ಕದ ಕಲ್ತಾರ್‌ನಲ್ಲಿರುವ ತನ್ನ ಊರಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಮೈಸೂರಿಗೆ ಸಮೀಪದ ಮಳವಳ್ಳಿ ಬಳಿ ಅವರು ಸವಾರಿ ಮಾಡುತ್ತಿದ್ದಾಗ, ಅಪರಿಚಿತ ವಾಹನವೊಂದು ಅವರ ಬೈಕ್‌ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ದೀಕ್ಷಿತ್ ಅವರಿಗೆ ತೀವ್ರ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!