ಪುತ್ತೂರು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ನೂತನ ಅಧ್ಯಕ್ಷರಾಗಿ ರಫೀಕ್ ದರ್ಬೆ, ಕಾರ್ಯದರ್ಶಿಯಾಗಿ ಸುಮಂಗಳ ಶೆಣೈ ಆಯ್ಕೆ
ಪುತ್ತೂರು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರಕ್ಕೆ ಮುಂದಿನ ಎರಡು ವರ್ಷ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಶಿಕ್ಷಣ ಸಂಪನ್ಮೂಲ ಒಕ್ಕೂಟದ ಪ್ರತಿನಿಧಿಯಾಗಿ ನಾರಾಯಣ ಕಿಲಂಗೊಡಿ ಆಗಮಿಸಿದ್ದರು. ಸಲಹಾ ಸಮಿತಿ ಗೆ ಕಸ್ತೂರಿ ಬೊಳುವಾರು, ನಯನಾ ರೈ, ಪತ್ರಕರ್ತ ಸಂಶುದ್ದೀನ್ ಸಂಪ್ಯ, ನೋಟರಿ ಸಾಹಿರಾ ಜುಬೈರ್ ಅವರನ್ನು ಆಯ್ಕೆ ಮಾಡಲಾಯಿತು,
ನೂತನ ಅಧ್ಯಕ್ಷರಾಗಿ ಮೊಹಮ್ಮದ್ ರಫೀಕ್ ದರ್ಬೆ, ಉಪಾದ್ಯಕ್ಷರಾಗಿ ರೋಹಿಣಿ ರಾಘವ, ಕಾರ್ಯದರ್ಶಿಯಾಗಿ ಸುಮಂಗಳಾ ಶೆಣೈ, ಜೊತೆ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಆರ್ಲಪದವು, ಕೋಶಾಧಿಕಾರಿಯಾಗಿ ವತ್ಸಲಾ ನಾಯಕ್,
ಸಂಘಟನಾ ಕಾರ್ಯದರ್ಶಿಯಾಗಿ ಪ್ರಶಾಂತ್ ಮುರ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರಿಣಾಕ್ಷಿ ಶೆಟ್ಟಿ,
ಇಸ್ಮಾಯಿಲ್ ನೆಲ್ಯಾಡಿ, ಪ್ರೇಮಲತಾ ಬನ್ನೂರು, ಸುಚಿತ್ರಾ,
ಅಂಬಿಕಾ, ಶಾರದಾ ಅರಸ್, ಪೂರ್ಣಿಮಾ ಮಲ್ಯ
ಆಯ್ಕೆಯಾದರು.