ಕರಾವಳಿಕ್ರೈಂ

ಮಂಗಳೂರು ತಂಡದಿಂದ ಯುವಕನಿಗೆ ಚೂರಿ ಇರಿತ: ಓರ್ವ ವಶಕ್ಕೆ

ಮಂಗಳೂರು: ನಾಲ್ವರು ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಬಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಎಂಬಲ್ಲಿ ನ.24ರಂದು ಸಂಜೆ ನಡೆದಿದೆ.
ಗಾಯಾಳುವನ್ನು ಎಡಪದವು ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಎಂದು ಗುರುತಿಸಲಾಗಿದೆ.


ಅಖಿಲೇಶ್ ಎಡಪದವಿನಿಂದ ಮಂಗಳೂರು ಕಡೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂದರ್ಭ ಬೈಕ್ ವೊಂದರಲ್ಲಿ ನಾಲ್ಕು ಮಂದಿ ಚೂರಿಗಳನ್ನು ಕೊಂಡುಹೋಗುತ್ತಿರುವುದನ್ನು ಗಮನಿಸಿ, ತನ್ನ ಮೊಬೈಲ್ನಲ್ಲಿ ಅವರ ವೀಡಿಯೊ ಚಿತ್ರೀಕರಣಕ್ಕೆ ಮುಂದಾಗಿ ದ್ದಾರೆ. ಇದನ್ನು ಗಮನಿಸಿದ ದುಷ್ಕರ್ಮಿಗಳು ಅಖಿಲೇಶ್‌ ರ ಮೇಲೆ ಚೂರಿ ಝಳಪಿಸಿದ್ದಾರೆ. ಈ ವೇಳೆ ಅವರ ಕೈಗೆ ಗಾಯ ವಾಗಿದೆ.

ಘಟನೆ ನಡೆದ ಕೂಡಲೇ ಎಚ್ಚೆತ್ತುಕೊಂಡ ಸಾರ್ವಜನಿಕರು ಓರ್ವ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಮೂವರು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.



ಕೃತ್ಯ ಎಸಗಿದ ಎಲ್ಲಾ ಆರೋಪಿಗಳ ಗುರುತು ಪತ್ತೆಹಚ್ಚ ಲಾಗಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು. ಘಟನೆ ನಡೆಯುವ ಮುನ್ನ ನಾಲ್ವರು ಆರೋಪಿಗಳು ಬಾರ್‌ನಿಂದ ಹೊರಬರುತ್ತಿರುವುದು ಸಿಸಿಟಿವಿ ಫೂಟೇಜ್‌ನಲ್ಲಿ ಕಂಡುಬಂದಿದೆ. ಆರೋಪಿಗಳು ಮದ್ಯದ ಅಮಲಿನಲ್ಲಿದ್ದಾರೆಯೇ ಅಥವಾ ಯಾವುದೇ ಇತರ ಮಾದಕ ದ್ರವ್ಯದ ಅಮಲಿನಲ್ಲಿದ್ದಾರೆಯೇ ಎಂದು ನಾವು ಪರಿಶೀಲಿಸುತ್ತಿದ್ದೇವೆ. ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!