ಈಶ್ವರ್ ಮಲ್ಪೆ ಸಹಿತ ಹಲವು ತಂಡಗಳಿಂದ ಶೋಧ ಕಾರ್ಯಾಚರಣೆ
ಮಂಗಳೂರು: ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಸಹೋದರ ಮಮ್ತಾಜ್ ಅಲಿ ಅವರ ನಾಪತ್ತೆ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಈಶ್ವರ್ ಮಲ್ಪೆ ಸಹಿತ ಹಲವು ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದು ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮಮ್ತಾಜ್ ಅಲಿ ಅವರು ನೀರಿಗೆ ಹಾರಿದ್ದಾರೆಯೇ ಅಥವಾ ಬೇರೆಲ್ಲಿಗೋ ಹೋಗಿರಬಹುದೇ ಎನ್ನುವ ಪ್ರಶ್ನೆ ಮೂಡಿದ್ದು ಆತಂಕಕ್ಕೆ ಕಾರಣವಾಗಿದೆ. ಸ್ಥಳದಲ್ಲಿ ಮಮ್ತಾಜ್ ಅಲಿ ಅವರ ಕುಟುಂಬಸ್ಥರು ಹಾಗೂ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ.
ಇಂದು ಮುಂಜಾನೆ ಮನೆಯಿಂದ ಹೊರಟಿದ್ದ ಮಮ್ತಾಜ್ ಅಲಿ ಅವರ ಕಾರು ಕೂಳೂರು ಸೇತುವೆ ಬಳಿ ಪತ್ತೆಯಾಗಿದ್ದು ಮಮ್ತಾಜ್ ಅಲಿ ಅವರು ನಿಗೂಢವಾಗಿ ಕಾಣೆಯಾಗಿದ್ದರು. ಕಾರುವ ಅಪಘಾತಗೊಂಡ ಸ್ಥಿತಿಯಲ್ಲಿ ಕಂಡು ಬಂದಿತ್ತು.