ಫಾತಿಮಾ ಬಾಷ್‌ಗೆ ವಿಶ್ವಸುಂದರಿ-2025 ಕಿರೀಟ
ಥಾಯ್ಲೆಂಡ್‌ನಲ್ಲಿ ನಡೆದ 2025ರ ವಿಶ್ವಸುಂದರಿ ಸ್ಪರ್ಧೆಯಲ್ಲಿ ಮೆಕ್ಸಿಕೋದ ಫಾತಿಮಾ ಬಾಷ್ ವಿಶ್ವಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ವಿಶ್ವದಾದ್ಯಂತದ 120ಕ್ಕೂ ಅಧಿಕ ಮಹಿಳೆಯರು ಸ್ಪರ್ಧೆಯಲ್ಲಿದ್ದು ಇವರಲ್ಲಿ ಮೆಕ್ಸಿಕೋ, ಐವರಿ ಕೋಸ್ಟ್ ಫಿಲಿಪ್ಪಿನ್ಸ್ ಥಾಯ್ಲೆಂಡ್ ಮತ್ತು ವೆನೆಝುವೆಲಾದ ಸ್ಪರ್ಧಿಗಳು ಅಂತಿಮ ಹಂತಕ್ಕೆ ಅರ್ಹತೆ ಪಡೆದಿದ್ದರು. ಭಾರತದ ಮಣಿಕಾ ಟಾಪ್ 12ರ ಹಂತದಲ್ಲಿ ಸ್ಪರ್ಧೆಯಿಂದ ನಿರ್ಗಮಿಸಿದರು. ಅಂತಿಮವಾಗಿ ಮೆಕ್ಸಿಕೋದ ಫಾತಿಮಾ ಬಾಷ್ ವಿಶ್ವಸುಂದರಿ ಕಿರೀಟಕ್ಕೆ ಪಾತ್ರರಾದರು.




