ವಲಯ ಮಟ್ಟದ ಪ್ರತಿಭಾ ಕಾರಂಜಿ: ಇಳಂತಿಲ ಜ್ಞಾನಭಾರತಿ ಶಾಲೆಗೆ ಪ್ರಶಸ್ತಿ
ಉಪ್ಪಿನಂಗಡಿ: ಬೈಪಾಡಿಯಲ್ಲಿ ನಡೆದ ಪೂಂಜಾಳಕಟ್ಟೆ ವಲಯ ಮಟ್ಟದ ಪ್ರೌಢ ಶಾಲಾ ಮಟ್ಟದ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಇಳಂತಿಲ ಜ್ಞಾನ ಭಾರತಿ ಹೈಸ್ಕೂಲ್ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಫಾತಿಮಾ ಶನುಮ್ ಇಂಗ್ಲೀಷ್ ಭಾಷಣದಲ್ಲಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡರು. ಕವಾಲಿ ಟೀಮ್ ದ್ವಿತೀಯ ಬಹುಮಾನ ಪಡೆದಿದೆ. ತಂಡದಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳಾದ ಎಂ. ಝಯೀದ್, ಶಹಾನಾಕಿಲ್, ಎಂ. ಎಚ್ ಶಮ್ಮಾಸ್, ಸಿಮಾಕ್, ಮುಹಮ್ಮದ್ ರಾಫಿ ಮತ್ತು 10ನೇ ತರಗತಿಯ ಮುಹಮ್ಮದ್ ಅಝೀಮ್ ಭಾಗವಹಿಸಿದ್ದರು.

ಶಾಲೆಯ ಆಡಳಿತ ಮಂಡಳಿಯು ವಿಜೇತರಿಗೆ ಅಭಿನಂದನೆ ಸಲ್ಲಿಸಿದೆ. ಶಾಲಾ ಅಧಿಕಾರಿಗಳು ಪ್ರಕಟಣೆಯಲ್ಲಿ. ಪ್ರತಿಭಾ ಕಾರಂಜಿ ಸ್ಪರ್ಧೆಯು ಶಾಲಾ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ವೇದಿಕೆಯಾಗಿದೆ ಎಂದು ಶಾಲಾ ಪ್ರಾಂಶುಪಾಲ ಇಬ್ರಾಹಿಂ ಕಲೀಲ್ ತಿಳಿಸಿದರು.



