ಅಶೋಕ ಜನಮನ: ರಾತ್ರಿಯಾದರೂ ಕೊಂಬೆಟ್ಟು ಮೈದಾನದಲ್ಲಿ ಜನವೋ ಜನ
ಪುತ್ತೂರು: ಅಶೋಕ ಜನಮನ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನ ಸಾಗರವೇ ಹರಿದು ಬಂದಿದ್ದು ರಾತ್ರಿಯಾದರೂ ಕೊಂಬೆಟ್ಟು ಮೈದಾನದತ್ತ ಜನರು ಬರುತ್ತಲೇ ಇದ್ದರು.

ಖುದ್ದು ಶಾಸಕ ಅಶೋಕ್ ರೈ ಅವರೇ ಮುಂದೆ ನಿಂತು ಜನರನ್ನು ನಿಯಂತ್ರಿಸುತ್ತಾ ಜನರಿಗೆ ದೀಪಾವಳಿ ಗಿಫ್ಟ್ ಹಂಚಿದರು. ಸಂಜೆ ವೇಳೆ ಮಳೆ ಬಂದಾಗ ತುಸು ಅಡಚಣೆ ಉಂಟಾಯಿತಾದರೂ ಆ ಬಳಿಕವೂ ಜನರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇತ್ತು.





