ಕರಾವಳಿಕ್ರೈಂರಾಜ್ಯ

ಪುತ್ತೂರಿನ ಯುವಕ ಬೆಂಗಳೂರು ಲಾಡ್ಜ್‌ನಲ್ಲಿ ಮೃತ್ಯು, ಸಾವಿನ ಸುತ್ತ ಅನುಮಾನ

ಪುತ್ತೂರು ಮೂಲದ ಯುವಕ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್ ವೊಂದರಲ್ಲಿ ಅನುಮಾ ನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

ಈ ಹಿಂದೆ ಕೌಡಿಚ್ಚಾರಿನಲ್ಲಿ ವಾಸವಿದ್ದ ತಕ್ಷಿತ್ (20ವ) ಮೃತಪಟ್ಟವರು ಎಂದು ಪೊಲೀಸರು ಗುರುತಿಸಿದ್ದಾರೆ.
ತಕ್ಷಿತ್ ಯುವತಿಯೊಂದಿಗೆ ಮಡಿವಾಳದ ಮಾರುತಿನಗರದ ಖಾಸಗಿ ಲಾಡ್ಜ್‌ನಲ್ಲಿ ತಂಗಿದ್ದ. ಎರಡು ದಿನಗಳ ಹಿಂದೆ ಯುವತಿ ಊರಿಗೆ ವಾಪಸ್ ಹೋಗಿದ್ದಾಳೆ. ಹಾಗಾಗಿ ತಕ್ಷಿತ್ ಕೊಠಡಿಯಲ್ಲಿ ಒಬ್ಬನೇ ಇದ್ದ ಎನ್ನಲಾಗಿದೆ.


ತಕ್ಷಿತ್ ಎಂಟು ದಿನಗಳ ಕಾಲ ಊಟ, ತಿಂಡಿಯನ್ನು ಆನ್‌ಲೈನ್ ಮೂಲಕ ಲಾಡ್ಜ್ ಕೊಠಡಿಗೆ ತರಿಸಿಕೊಂಡಿದ್ದ ಬಳಿಕ ಕೊಠಡಿಯಿಂದ ಯಾರೂ ಹೊರ ಬಾರದಿದ್ದಾಗ ಅನುಮಾನಗೊಂಡ ಸಿಬ್ಬಂದಿ ಬಾಗಿಲು ತೆರೆದು ನೋಡಿದಾಗ ಹಾಸಿಗೆ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡು ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಡಿವಾಳ ಠಾಣಾ ಪೊಲೀಸರು ಕೊಠಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ತಕ್ಷಿತ್ ಹೇಗೆ ಮೃತಪಟ್ಟರು ಎನ್ನುವುದು ಅನುಮಾನಕ್ಕೆ ಕಾರಣವಾಗಿದ್ದು ತನಿಖೆಯಿಂದಷ್ಟೇ ಸತ್ಯಾಂಶ ಹೊರ ಬರಲಿದೆ.

Leave a Reply

Your email address will not be published. Required fields are marked *

error: Content is protected !!