ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ಅವರಿಗೆ ಮಡಿಕೇರಿಯಲ್ಲಿ ಸನ್ಮಾನ
ಪುತ್ತೂರು: ಸರ್ವೆ ಸೌಹಾರ್ದ ವೇದಿಕೆ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ಅವರನ್ನು ಕೊಡಗು ಜಿಲ್ಲೆಯ ಮಡಿಕೇರಿ ಕ್ಯಾಪಿಟಲ್ ವಿಲೇಜ್ ರೆಸಾರ್ಟ್‌ನಲ್ಲಿ ಅ.20ರಂದು ನಡೆದ ಗುರು-ಶಿಷ್ಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಮುಖ್ಯಗುರು ಶ್ರೀನಿವಾಸ್ ಹೆಚ್.ಬಿ ಅವರ ಜನ್ಮ ದಿನದ ಅಂಗವಾಗಿ ಹಿರಿಯ ವಿದ್ಯಾರ್ಥಿ ದಿನ, ಗುರು-ಶಿಷ್ಯರ ಸಮ್ಮಿಲನ ಕಾರ್ಯಕ್ರಮ ಮಡಿಕೇರಿಯಲ್ಲಿ ನಡೆಯಿತು.
ಸೌಹಾರ್ದ ಸಮಾಜ ನಿರ್ಮಾಣಕ್ಕಾಗಿ ಸಲ್ಲಿಸಿರುವ ಕೊಡುಗೆ, ಸಂಘಟನಾತ್ಮಕ ಕಾರ್ಯಚಟುವಟಿಕೆ ಹಾಗೂ ಮಾನವೀಯ ಸೇವೆಗಾಗಿ ಕೆ.ಎಂ ಹನೀಫ್ ರೆಂಜಲಾಡಿ ಅವರನ್ನು ಗೌರವಿಸಿ ಸನ್ಮಾನಿಸಲಾಗಿದೆ.
ಸನ್ಮಾನ ಸ್ವೀಕರಿಸಿದ ಕೆ.ಎಂ ಹನೀಫ್ ರೆಂಜಲಾಡಿ ಮಾತನಾಡಿ ಈ ಸನ್ಮಾನ ನನ್ನ ಪಾಲಿನ ಅವಿಸ್ಮರಣೀಯ ಕ್ಷಣ, ನಾನು ಸನ್ಮಾನಕ್ಕಾಗಿ ಯಾವುದನ್ನೂ ಮಾಡಿಲ್ಲ, ನನ್ನ ಕರ್ತವ್ಯ ಮತ್ತು ಜವಾಬ್ದಾರಿ ಎನ್ನುವ ನೆಲೆಯಲ್ಲಿ ಕೆಲವು ಕಾರ್ಯಚಟುವಟಿಕೆ, ಮಾನವೀಯ ಸೇವೆಗಳನ್ನು ಮಾಡಿದ್ದೇನೆ, ನನ್ನ ಅಳಿಲು ಸೇವೆಯನ್ನು ಗುರುತಿಸಿ ನನ್ನ ಗುರುಗಳ ನೇತೃತ್ವದಲ್ಲಿ ಸನ್ಮಾನ ಸಿಕ್ಕಿರುವುದು ಅತೀವ ಸಂತೋಷ ತಂದಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಪ್ರಮುಖರಾದ ಶ್ರೀನಿವಾಸ್ ಹೆಚ್.ಬಿ, ಡಾ.ಸೀತಾರಾಮ ಭಟ್ ಕಲ್ಲಮ, ಮಹಾಬಲ ರೈ ಮೇಗಿನಗುತ್ತು, ಪ್ರಕಾಶ್ ಶೆಟ್ಟಿಮಜಲು ಬೆಂಗಳೂರು, ಸುರೇಶ್ ಎಸ್.ಡಿ, ಗೌತಮ್‌ರಾಜ್ ಕರುಂಬಾರು ಉಪಸ್ಥಿತರಿದ್ದರು. ಕಮಲೇಶ್ ಎಸ್.ವಿ ಕಾರ್ಯಕ್ರಮ ನಿರೂಪಿಸಿದರು.