ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಗೆ ಖ್ಯಾತ ಧಾರ್ಮಿಕ ವಿದ್ವಾಂಸ ಪೇರೋಡ್ ಉಸ್ತಾದ್ ಭೇಟಿ

ಪುತ್ತೂರು: ಸಂಪ್ಯ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಗೆ ಖ್ಯಾತ ಧಾರ್ಮಿಕ ವಿದ್ವಾಂಸ, ಕುಟ್ಯಾಡಿ ಸಿರಾಜುಲ್ ಹುದಾ ಸಂಸ್ಥೆಯ ರೂವಾರಿ, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಸೆ.15ರಂದು ಸಂಜೆ ಭೇಟಿ ನೀಡಿ ಆಸ್ಪತ್ರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಚೇರ್ ಮೆನ್ ಅಶ್ರಫ್ ಕಮ್ಮಾಡಿಯವರು ಪೇರೋಡ್ ಉಸ್ತಾದರನ್ನು ಸ್ವಾಗತಿಸಿದರು. ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಶ್ಮೀರ್ ಕಮ್ಮಾಡಿ, ಕಾನೂನು ಸಲಹೆಗಾರ ಅಡ್ವೋಕೆಟ್ ಮೂಸಕುಂಞಿ ಪೈಂಬಚ್ಚಾಲ್, ಪಿ.ಆರ್.ಓ ರಝಾಕ್ ಸಾಲ್ಮರ, ಉದ್ಯಮಿ ಅಶ್ರಫ್ ಅಡ್ಕಾರ್ ಉಪಸ್ಥಿತರಿದ್ದರು.