ಪುತ್ತೂರಿನಿಂದ ಜಾವಗಲ್ ಗೆ ಕೆ.ಎಸ್.ಆರ್.ಟಿ.ಸಿ ಬಸ್ ಆರಂಭಕ್ಕೆ ಶಾಸಕರ ಸೂಚನೆ
ಪುತ್ತೂರು: ಪುತ್ತೂರಿನಿಂದ ಜಾವಗಲ್ ಗೆ ಕೆ.ಎಸ್.ಆರ್.ಟಿ.ಸಿ ಬಸ್ ಸೇವೆ ಆರಂಭ ಮಾಡುವಂತೆ ಕರ್ನಾಟಕ ಸಾರಿಗೆ ಸಂಸ್ಥೆ ಪುತ್ತೂರು ಡಿಪೋಗೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ.

ಈ ಹಿಂದೆ ಪುತ್ತೂರಿನಿಂದ ಜಾವಗಲ್ ಗೆ ಬಸ್ ಸೇವೆ ಇತ್ತು, ಅದನ್ನು ರದ್ದು ಮಾಡಲಾಗಿತ್ತು . ಸುಮಾರು 15 ವರ್ಷಗಳಿಂದ ನಿಲ್ಲಿಸಲಾಗಿರುವ ಸೇವೆಯನ್ನು ಶೀಘ್ರವೇ ಪ್ರಾರಂಭ ಮಾಡುವಂತೆ ಶಾಸಕರು ಸೂಚನೆ ನೀಡಿದ್ದಾರೆ. ಜಾವಗಲ್ ಗೆ ಹೆಚ್ಚಿನ ಭಕ್ತರು ಪುತ್ತೂರಿನಿಂದ ದಿನಂಪ್ರತಿ ತೆರಳುತ್ತಿದ್ದಾರೆ. ಬಸ್ ಸೇವೆ ಆರಂಭ ಮಾಡುವಂತೆ ಪುತ್ತೂರು ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಶಕೂರ್ ಹಾಜಿಯವರು ಕೆಲ ತಿಂಗಳ ಹಿಂದೆ ಶಾಸಕರಿಗೆ ಮನವಿ ಸಲ್ಲಿಸಿದ್ದರು.
ಇದೀಗ ಶಾಸಕರು ಬಸ್ ಸೇವೆ ಆರಂಭ ಮಾಡುವಂತೆ ಸೂಚನೆ ನೀಡಿದ್ದು ಈ ಭಾಗದ ಬಹುಕಾಲದ ಬೇಡಿಕೆಯನ್ನು ಶಾಸಕರು ಈಡೇರಿಸಿದ್ದಾರೆ.