ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ಮಧ್ಯೆ ವಿದ್ಯುತ್ ಚಾಲಿತ ಪ್ಯಾಸೆಂಜರ್ ರೈಲು ಆರಂಭ
ಮಂಗಳೂರು: ಬಹುದಿನಗಳ ಬೇಡಿಕೆಯಾಗಿರುವ ಮಂಗಳೂರು ಸೆಂಟ್ರಲ್ ಸುಬ್ರಹ್ಮಣ್ಯ ನಡುವೆ ವಿದ್ಯುತ್ ಚಾಲಿತ ಪ್ಯಾಸೆಂಜರ್ ರೈಲುಗಳ ಸಂಚಾರ ಸೆ.15ರಂದು ಬೆಳಗ್ಗೆ ಆರಂಭಗೊಂಡಿದೆ. ವಿದ್ಯುತ್ ಚಾಲಿತ ಪ್ರಯಾಣಿಕ ರೈಲು ಸಂಚಾರ ಆರಂಭದೊಂದಿಗೆ ಭವಿಷ್ಯದಲ್ಲಿ ಮಂಗಳೂರು-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಾಟಕ್ಕೆ ಸಹಕಾರಿಯಾಗುವುದನ್ನು ನಿರೀಕ್ಷಿಸಲಾಗಿದೆ.

ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ನಡುವೆ ವಿದ್ಯುತ್ ಚಾಲಿತ ರೈಲು ಆರಂಭಗೊಳ್ಳುವುದರೊಂದಿಗೆ ಈ ಭಾಗದ ಪ್ರಯಾಣಿಕರ ಬಹುಕಾಲದ ಕನಸು ನನಸಾಗಿದೆ.
ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ರೈಲು ನಿಲ್ದಾಣಗಳ ನಡುವಿನ ಹಳಿ ವಿದ್ಯುದೀಕರಣ ಯೋಜನೆ ಪೂರ್ಣಗೊಂಡು ಇದೀಗ ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ನಡುವೆ ವಿದ್ಯುತ್‌ಚಾಲಿತ ರೈಲುಗಳ ಓಡಾಟ ಆರಂಭಗೊಂಡಿದೆ. ಸೆ.11 ರಂದು ವಿದ್ಯುತ್‌ಚಾಲಿತ ರೈಲು ಇಂಜಿನ್ ಪ್ರಾಯೋಗಿಕ ಪರೀಕ್ಷೆ ನಡೆದು ಅಧಿಕೃತ ಆರಂಭಕ್ಕೆ ದಿನ ನಿಗದಿಯಾಗಿತ್ತು





