ಕರಾವಳಿಕ್ರೈಂ

ಧರ್ಮಸ್ಥಳ ಪ್ರಕರಣ: ನ್ಯಾಯವಾದಿಗಳ ವಿರುದ್ಧ ಎಸ್‌ಐಟಿಗೆ ದೂರು

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ್ಯಾಯವಾದಿ ಕೆ.ವಿ.ಧನಂಜಯ್ ಹಾಗೂ ಇತರ ನ್ಯಾಯವಾದಿಗಳ ವಿರುದ್ಧ ಎಸ್‌ ಐಟಿ ಕಚೇರಿಗೆ ಬುಧವಾರ ದೂರು ನೀಡಲಾಗಿದೆ.

ರಾಜೇಂದ್ರ ಅಜ್ರ ದೂರು ನೀಡಿದ್ದು, ದೂರುದಾರ ಚಿನ್ನಯ್ಯ ತನ್ನ ಹೇಳಿಕೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯವಾದಿ ಕೆ.ವಿ.ಧನಂಜಯ್‌ಗೆ ಎಲ್ಲ ದಾಖಲೆಗಳನ್ನು ನೀಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಈ ದಾಖಲೆಗಳನ್ನು ಕೂಡಲೇ ಎಸ್ ಐಟಿ ಪುಶೀಲಿಸಬೇಕು ಹಾಗೂ ಈ ಸಂಚಿನಲ್ಲಿ ನ್ಯಾಯವಾದಿಗಳಾದ ಕೆ.ವಿ.ಧನಂಜಯ್, ಓಜಸ್ವಿ ಗೌಡ, ಸುತಿನ್ ದೇಶಪಾಂಡೆ, ದಿವಿನ್, ಧೀರಜ್, ಮಂಜುನಾಥ್ ಭಾಗಿಯಾಗಿರುವ ಅನುಮಾನವಿದ್ದು, ಇವರನ್ನು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ವಿನಂತಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!