ಸಾಕ್ಷಿ ದೂರುದಾರನ ಬಂಧನದ ಬಗ್ಗೆ ಗಿರೀಶ್ ಮಟ್ಟಣ್ಣನವರ್ ಹೇಳಿದ್ದೇನು?
ಮಂಗಳೂರು: ಎಸ್.ಐ.ಟಿ ತಂಡ ಸಾಕ್ಷಿ ದೂರುದಾರನನ್ನು ಬಂಧಿಸಿರುವ ವಿಚಾರದಲ್ಲಿ ಗಿರೀಶ್ ಮಟ್ಟಣ್ಣನವರ್ ಪ್ರತಿಕ್ರಿಯೆ ನೀಡಿದ್ದು ಸಾಕ್ಷಿ ದೂರುದಾರನನ್ನು ವಶಕ್ಕೆ ಪಡೆದಿರುವ ವಿಚಾರವನ್ನು ಸ್ವಾಗತಿಸುತ್ತೇನೆ. ತನಿಖೆಯ ದೃಷ್ಟಿಯಿಂದ ಇದು ಉತ್ತಮ ವಿಚಾರ ಎಂದು ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಷಡ್ಯಂತ್ರ ಏನೇ ಇದ್ದರೂ ಎಸ್‌ಐಟಿಯವರೇ ಉತ್ತರ ಕೊಡುತ್ತಾರೆ. ಅರೆಸ್ಟ್ ಆಗಿದ್ದು ಒಳ್ಳೆಯ ಬೆಳವಣಿಗೆ. ಎಸ್‌ಐಟಿ ಕರೆದರೆ ನನಗೆ ಮತ್ತು ಆತನಿಗೆ ಏನು ಸಂಬಂಧ ಇದೆ ಎನ್ನುವುದನ್ನು ತಿಳಿಸುತ್ತೇನೆ ಎಂದು ನುಡಿದರು.
ಸಾಕ್ಷಿ ದೂರುದಾರನನ್ನು ವಶಕ್ಕೆ ಪಡೆದಿದ್ದೇವೆ ಎಂಬ ಕಾರಣಕ್ಕೆ ಎಸ್.ಐ.ಟಿ ತನಿಖೆಯ ಬಗ್ಗೆ ಯಾವುದೇ ಅನುಮಾನದ ಅಗತ್ಯವಿಲ್ಲ. ಎಸ್.ಐ.ಟಿ ತಂಡ ಅಗತ್ಯವಿದ್ದಲ್ಲಿ ಆತನ ಮಂಪರು ಪರೀಕ್ಷೆಯನ್ನು ನಡೆಸಲಿ ಎಂದರು.