ರಷ್ಯಾ ಅಧ್ಯಕ್ಷ ಪುಟಿನ್‌ಗೆ ಬರ್ತ್ ಡೇ ಗಿಫ್ಟ್ ನೀಡಿದ ಬೆಲಾರಸ್ ಅಧ್ಯಕ್ಷ
ಮಾಸ್ಕೊ: ಕಳೆದ ಫೆಬ್ರವರಿಯಲ್ಲಿ ಆರಂಭವಾದ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಈಗಲೂ ಮುಂದುವರಿದಿದೆ. ಯುದ್ಧಭೂಮಿಯಲ್ಲಿ ಉಕ್ರೇನಿಯನ್ ಯಶಸ್ಸು ಪಡೆಯುತ್ತಿರುವ ಸುದ್ದಿಗಳ ನಡುವೆ ರಷ್ಯಾದ ಅಧ್ಯಕ್ಷ ಫ್ಲಾಡಿಮಿರ್ ಪುಟಿನ್ ಅವರು ತಮ್ಮ 70ನೇ ಹುಟ್ಟುಹಬ್ಬವನ್ನು ಯಾವುದೇ ಆಡಂಬರವಿಲ್ಲದೆ ಆಚರಿಸಿದ್ದಾರೆ.
ಪುಟಿನ್ ಹುಟ್ಟುಹಬ್ಬಕ್ಕೆ ಅವರ ನಿಕಟ ಮಿತ್ರ, ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ನೀಡಿದ ಉಡುಗೊರೆ ಇದೀಗ ಸುದ್ದಿ ಮಾಡುತ್ತಿದೆ. ಅದುವೇ ಟ್ರಾಕ್ಟರ್…! ಮಾಧ್ಯಮ ವರದಿಗಳ ಪ್ರಕಾರ ಉಭಯ ನಾಯಕರು ಪುಟಿನ್ ತವರು ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ಕಾನ್‌ಸ್ಟಾಂಟಿನ್ ಅರಮನೆಯಲ್ಲಿ ಭೇಟಿಯಾದರು. ಈ ವೇಳೆ ಲುಕಾಶೆಂಕೊ ಅವರು ಬೆಲಾರಸ್ ನಿರ್ಮಿತ ಟ್ರಾಕ್ಟರ್‌ನ್ನು ಉಡುಗೊರೆಯಾಗಿ ರಷ್ಯಾದ ಅಧ್ಯಕ್ಷರಿಗೆ ನೀಡಿದರು.
ವಿಶೇಷ ಏನೆಂದರೆ ರಷ್ಯಾ-ಉಕ್ರೇನ್ ಯುದ್ಧದ ಆರಂಭಿಕ ಹಂತದಲ್ಲಿ, ಪ್ರತಿರೋಧದ ಸಂಕೇತವಾಗಿ ಉಕ್ರೇನ್ ಟ್ರಾಕ್ಟರ್‌ನ್ನು ಬಳಸಿತ್ತು. ರಷ್ಯಾದ ಟ್ಯಾಂಕ್‌ಗಳನ್ನು ಎಳೆಯುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.