ರಾಷ್ಟ್ರೀಯ

ಅಹ್ಮದಾಬಾದ್‍ನಲ್ಲಿ ಅತ್ಯಂತ ದೊಡ್ಡ ಮಾಲ್ ಸ್ಥಾಪಿಸಲಿರುವ ಲುಲು ಗ್ರೂಪ್

ಅಹ್ಮದಾಬಾದ್: ಗುಜರಾತ್‍ನ ಅಹ್ಮದಾಬಾದ್‍ನಲ್ಲಿ (Ahmedabad) ದೇಶದಲ್ಲಿಯೇ ಅತ್ಯಂತ ದೊಡ್ಡ ಶಾಪಿಂಗ್ ಮಾಲ್ ಅನ್ನು ಲುಲು ಗ್ರೂಪ್ (Lulu Group) ಸ್ಥಾಪಿಸಲಿದೆ. ಅಹ್ಮದಾಬಾದ್‍ನ ಈ ಲುಲು ಮಾಲ್‍ಗಾಗಿ ಸಂಸ್ಥೆ ರೂ. 3000 ಕೋಟಿ ಹೂಡಿಕೆ ಮಾಡಲಿದೆ. ಮುಂದಿನ ವರ್ಷಾರಂಭದಲ್ಲಿ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆಯಿದ್ದು ಇದು ದೇಶದ ಮೂರನೇ ಲುಲು ಮಾಲ್ ಆಗಲಿದೆ ಎಂದು

FILE PHOTO

ಈಗಾಗಲೇ ಕೇರಳದ ಕೊಚ್ಚಿ ಹಾಗೂ ಉತ್ತರ ಪ್ರದೇಶದ ಲಕ್ನೋ ನಗರದಲ್ಲಿ ಲುಲು ಮಾಲ್‍ಗಳು ಆರಂಭಗೊಂಡಿವೆ.

ಅಹ್ಮದಾಬಾದ್‍ನ ಮಾಲ್‍ಗಾಗಿ ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಮುಂದಿನ ವರ್ಷ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಲುಲು ಗ್ರೂಪ್‍ನ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದ ನಿರ್ದೇಶಕ ವಿ ನಂದಕುಮಾರ್ ತಿಳಿಸಿದ್ದಾರೆ.

ಅಹ್ಮದಾಬಾದ್‍ನಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಲುಲು ಮಾಲ್‍ನಲ್ಲಿ 300 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ರ್ಯಾಂಡ್‍ಗಳ ಉತ್ಪನ್ನಗಳಿರಲಿವೆ. ಈ ಮಾಲ್‍ನಲ್ಲಿ 15 ಮಲ್ಟಿಪ್ಲೆಕ್ಸ್ ಗಳೂ ಇರಲಿವೆ.

ಈ ಮಾಲ್‍ನಲ್ಲಿ ದೇಶದಲ್ಲಿಯೇ ಆತ್ಯಂತ ದೊಡ್ಡ ಮಕ್ಕಳ ಅಮ್ಯೂಸ್‍ಮೆಂಟ್ ಸೆಂಟರ್ ಮತ್ತಿತರ ಆಕರ್ಷಣೆಗಳಿರಲಿವೆ ಎಂದು ನಂದಕುಮಾರ್
ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!