ಕರಾವಳಿ

ಬೆಳಂದೂರು ಈಡನ್ ಗ್ಲೋಬಲ್ ಶಾಲೆಯಲ್ಲಿ
ವಿದ್ಯಾರ್ಥಿ ಸಂಘದ ಚುನಾವಣೆ-ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಿ ವಿದ್ಯಾರ್ಥಿ ನಾಯಕರ ಆಯ್ಕೆ ನಡೆಸಲಾಯಿತು. ‘ನನ್ನ ಆಯ್ಕೆ ಪ್ರಜಾಪ್ರಭುತ್ವ ಜಾಗೃತಿಯೊಂದಿಗೆ’ ಎಂಬ ಧ್ಯೇಯ ವಾಕ್ಯದಲ್ಲಿ ಪ್ರಾಂಶುಪಾಲರು ಹಾಗೂ ಸಂಸ್ಥೆಯ ಮುಖ್ಯ ಚುನಾವಣಾಧಿಕಾರಿಯಾಗಿರುವ ಕೆ.ಪಿ ರಂಸಿ ಮುಹಮ್ಮದ್ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಮತದಾನದ ಮಹತ್ವ ತಿಳಿಯಲು ಭಾರತೀಯ ಚುನಾವಣಾ ಆಯೋಗದ ಮಾದರಿಯಂತೆ ಎಲ್ಲ ಪ್ರಕ್ರಿಯೆ ಒಳಗೊಂಡು ಪ್ರತಿವರ್ಷ ನಮ್ಮ ಸಂಸ್ಥೆಯಲ್ಲಿ ಚುನಾವಣೆ ನಡೆಸುತ್ತಿದ್ದು ಮತದಾನ ನಮ್ಮೆಲ್ಲರ ಹಕ್ಕು, ಅದನ್ನು ಪ್ರಜಾಪ್ರಭುತ್ವದ ಹಬ್ಬದ್ದಂತೆ ಆಚರಿಸಬೇಕೆಂದು ಅವರು ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು.

ಭಾರತೀಯ ಚುನಾವಣಾ ಮಾದರಿಯಂತೆ ನಾಮಪತ್ರ ಸಲ್ಲಿಕೆ, ಹಿಂಪಡೆಯುವಿಕೆ, ಅಭ್ಯರ್ಥಿಗಳ ಸಂದರ್ಶನ, ಪ್ರಣಾಳಿಕೆ ಘೋಷಣೆ, ಬಹಿರಂಗ ಪ್ರಚಾರ ವಿದ್ಯಾರ್ಥಿಗಳು ನಡೆಸಿದರು. ಚುನಾವಣಾ ಹಾಗೂ ಪ್ರಜಾಪ್ರಭುತ್ವ ಜಾಗೃತಿಗಾಗಿ ರಸಪ್ರಶ್ನೆ ಸಹಿತ ಹಲವು ಕಾರ್ಯಕ್ರಮ ನಡೆಯಿತು. ಚುನಾವಣೆಯ ಜ್ಞಾನ ಶಾಲಾ ಹಂತದಲ್ಲಿಯೇ ತಿಳಿದ ವಿದ್ಯಾರ್ಥಿ ಭವಿಷ್ಯದಲ್ಲಿ ಪ್ರಬುದ್ಧ ಮತದಾರನಾಗಿ ಬದಲಾಗುತ್ತಾನೆ. ಆದ್ದರಿಂದ ಮತದಾನದ ಅರಿವು ಸದಾ ನಿಮ್ಮಲ್ಲಿ ಇರಬೇಕು ಎಂದು ಮತದಾನ ಸಂದರ್ಭದಲ್ಲಿ ಭೇಟಿ ನೀಡಿದ ಸಂಸ್ಥೆಯ ಟ್ರಸ್ಟಿ ಖಾದರ್ ಹಾಜಿ ಹೇಳಿದರು.

ಚುನಾವಣಾ ಕಣದಲ್ಲಿ 5 ವಿಭಾಗದಲ್ಲಿ 24 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 1ರಿಂದ 10 ನೇ ತರಗತಿಯ 700ಕ್ಕೂ ಅಧಿಕ ವಿದ್ಯಾರ್ಥಿಗಳು ಮತದಾನದಲ್ಲಿ ಭಾಗಿಯಾದರು. ಶಾಲಾ ವಿದ್ಯಾರ್ಥಿ ನಾಯಕನಾಗಿ ಮುಹಮ್ಮದ್ ಶಹೀಮ್, ನಾಯಕಿಯಾಗಿ ರೀಮಾ ಶಮ್ರೀನ್, ಉಪನಾಯಕನಾಗಿ ಮುಹಮ್ಮದ್ ತುಫೈಲ್, ಉಪನಾಯಕಿಯಾಗಿ ಇನ ಫಾತಿಮಾ, ಸಾಂಸ್ಕೃತಿಕ ವಿಭಾಗದ ನಾಯಕನಾಗಿ ಮುಹಮ್ಮದ್ ಅಲಾವುದ್ದಿನ್, ನಾಯಕಿಯಾಗಿ ಆಯಿಶಾ ಶಿಝ, ಕ್ರೀಡಾ ವಿಭಾಗದ ನಾಯಕನಾಗಿ ಶಿಫಾಝ್, ನಾಯಕಿಯಾಗಿ ಫಾತಿಮಾತ್ ಶಮ್ಲಾ, ಆರೋಗ್ಯ ಮತ್ತು ಶಿಸ್ತು ವಿಭಾಗದ ನಾಯಕನಾಗಿ ಅಹ್ಮದ್ ನಶಾತ್, ನಾಯಕಿಯಾಗಿ ಫಾತಿಮತ್ ಜಸ್ಮಿನಾ ಚುನಾಯಿತರಾಗಿ ಆಯ್ಕೆಯಾದರು. ಚುನಾವಣೆ ಭಾಗವಾಗಿ ರಾಷ್ಟ್ರ, ರಾಜ್ಯ ರಾಜಕೀಯದ, ಸರಕಾರದ ಬಗ್ಗೆ ಅರಿವು ಮೂಡಿಸಲು ನಡೆಸಿದ್ದ ರಸ ಪ್ರಶ್ನೆ ವಿಭಾಗದಲ್ಲಿ ಮುಹಮ್ಮದ್ ಅಬ್ಬಾದ್, ಫಾತಿಮಾ ಮನ್ಹ, ಹುಸ್ಸನ್ ನಿಶಾನುಲ್ ಹನೀಫ್ ಎಂಬ ಮೂವರು ವಿದ್ಯಾರ್ಥಿಗಳು ‘ಚಾಣಕ್ಯ ಅವಾರ್ಡ್’ ಪ್ರಶಸ್ತಿ ವಿಜೇತರಾದರು.

Leave a Reply

Your email address will not be published. Required fields are marked *

error: Content is protected !!