ಕರಾವಳಿ

ಸುಳ್ಯ ತಾಲೂಕು ಸಖಾಫಿ ಸಮ್ಮಿಟ್



ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್.ರಿ.ಇದರ ಆಶ್ರಯದಲ್ಲಿ ಕಾರ್ಯಚರಿಸುತ್ತಿರುವ ಸುಳ್ಯ ತಾಲೂಕು ಸಖಾಫಿ ಕೌನ್ಸಿಲ್ ಇದರ ಸಖಾಫಿ ಸಮ್ಮಿಟ್ 2023 ಕಾರ್ಯಕ್ರಮ ಜ 25 ರಂದು ಸುಳ್ಯ ಸುನ್ನಿ ಸೆಂಟರ್ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಲತೀಫ್ ಸಖಾಫಿ ಬಾಳೆಮಕ್ಕಿ ದುವಾ ನೆರವೇರಿಸಿದರು.
ಇಬ್ರಾಹಿಂ ಸಖಾಫಿ ಕರಿಂಬಿಲಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ದ ಕ ಜಿಲ್ಲಾ ಸಖಾಫಿ ಕೌನ್ಸಿಲ್ ಮುಖಂಡರಾದ ಮಹಮ್ಮದ್ ಅಲಿ ಸಖಾಫಿ ಅಸ್ಹರಿಯಾ ಕಾರ್ಯಕ್ರಮದ ಮುಖ್ಯಪ್ರಭಾಷಣ ಮಾಡಿ ಸಖಾಫಿ ಬಾಂಧವರು ಸಮಾಜದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಮಾಹಿತಿಗಳನ್ನು ನೀಡಿದರು. ಈ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಸಮುದಾಯದ ಕಟ್ಟ ಕಡೆಯ ವ್ಯಕ್ತಿಯನ್ನು ಪರಿಚಯಿಸುವ ಕಾರ್ಯ ಮಾಡಬೇಕೆಂದು ಹೇಳಿದರು.


ಸುಳ್ಯ ತಾಲೂಕಿನ ಸುಮಾರು ಮೂವತ್ತಕ್ಕೂ ಹೆಚ್ಚು ಸಖಾಫಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುಳ್ಯ ತಾಲೂಕು ಸಮಿತಿಯ ಕಾರ್ಯದರ್ಶಿ ಬಶೀರ್ ಸಖಾಫಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಲತೀಫ್ ಸಖಾಫಿ ಗೂನಡ್ಕ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!